ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಿ- ಕೆಆರ್‌ಪಿಪಿ ಮುಖಂಡ ಧರಪ್ಪನಾಯಕ ಆಗ್ರಹ

KRPP Protest
ಸಿರುಗುಪ್ಪದಲ್ಲಿ ಕೆಆರ್‌ಪಿ ಪಕ್ಷದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಪಕ್ಷದ ಮುಖಂಡ ಟಿ.ಧರಪ್ಪನಾಯಕ ಮಾತನಾಡಿದರು.
Published on

ಸಿರಗುಪ್ಪ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೆಆರ್‌ಪಿಪಿ ಕಾರ್ಯಕರ್ತರು ನಗರದ ತಾಲೂಕು ಕ್ರೀಡಾಂಗಣದಿಂದ ತಾಲೂಕು ಕಚೇರಿವರೆಗೆ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪಕ್ಷದ ಮುಖಂಡ ಧರಪ್ಪನಾಯಕ ಮಾತನಾಡಿ, ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಸರ್ಕಾರಗಳು ಬಡವರನ್ನು ಬೀದಿಗೆ ತಳ್ಳುವ ಕಾರ್ಯವನ್ನು ಮಾಡುತ್ತಿವೆ. ಬೆಲೆಗಳು ನಿರಂತರವಾಗಿ ಏರಿಕೆಯಿಂದ ಜನರಿಗೆ ಕುಟುಂಬ ನಿರ್ವಹಣೆ ಕಷ್ಟಕರವಾಗಲಿದೆ. ಕೂಡಲೇ ರಾಜ್ಯ-ಕೇಂದ್ರ ಸರ್ಕಾರಗಳು ಬೆಲೆಗಳನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಸತ್ಯನಾರಾಯಣ, ಮಲ್ಲಿಕಾರ್ಜುನ, ಮಾರೆಪ್ಪ, ಈರಣ್ಣ, ರಾಮಯ್ಯ, ಪರಮೇಶ, ವಿನೋದಕುಮಾರ್, ಮೌಲಾಸಾಬ್, ಎಂ.ವೀರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net