ಸಿರಗುಪ್ಪದ ದೊಡ್ಡಹಳ್ಳದಲ್ಲಿ ಮೀನು ಹಿಡಿಯಲು ಹೋದ ಯುವಕ ತೆಪ್ಪ ಮಗುಚಿ ಸಾವು

31072021 Siraguppa youn man death
Published on

ಸಿರಗುಪ್ಪ: ಹಳೇ ಮಾಟೂರು ಹತ್ತಿರದ ದೊಡ್ಡಹಳ್ಳದಲ್ಲಿ ಮೀನು ಹಿಡಿಯಲು ಹೋದ ಯುವಕನೊಬ್ಬ ತೆಪ್ಪ ಮಗುಚಿ ಶುಕ್ರವಾರ ಸಂಜೆ ಮೃತಪಟ್ಟಿದ್ದಾನೆ.

ಗ್ರಾಮದ ದಾಸರ ದೊಡ್ಡ ಯಂಕೋಬ (28) ಮೃತ. ಸ್ನೇಹಿತರೊಂದಿಗೆ ತೆಪ್ಪದಲ್ಲಿ ಮೀನು ಹಿಡಿಯಲು ಹಳ್ಳಕ್ಕೆ ಹೋಗಿದ್ದರು.

ಒಂದು ಬಾರಿ ಮೀನು ಹಿಡಿದು ತಂದಿದ್ದು, ಸ್ನೇಹಿತರು ಅದನ್ನು ತೊಳೆಯುತ್ತಿದ್ದರು. ಆದರೆ, ಯಂಕೋಬ ಮತ್ತೊಮ್ಮೆ ಮೀನು ಹಿಡಿಯಲು ತೆರಳಿದಾಗ ತೆಪ್ಪ ಮಗುಚಿದೆ. ಇದರಿಂದ ಹೊರಬರಲಾಗದೆ ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆದರೂ ರಾತ್ರಿಯಾದ ಕಾರಣ ಅರ್ಧಕ್ಕೆ ನಿಲ್ಲಿಸಿದ್ದರು.

ಶನಿವಾರ ಶೋಧ ನಡೆಸಿದಾಗ ಮೃತದೇಹ ದೊರೆತಿದೆ. ಹಚ್ಚೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net