ವಾರ ಕಳೆದರೂ ಆರಂಭವಾಗದ ಸೇತುವೆ ಮೇಲೆ ಸಂಚಾರ

11092022 siraguppa hagari river
Published on

ಸಿರಗುಪ್ಪ: ತಾಲೂಕಿನ ರಾರಾವಿ ಗ್ರಾಮದ ಹತ್ತಿರದ ವೇದಾವತಿ ಹಗರಿ ನದಿ ಸೇತುವೆ ಮೇಲೆ ಜನ, ವಾಹನ ಸಂಚಾರ ಸ್ಥಗಿತಗೊಂಡು ಒಂದು ವಾರ ಕಳೆದರೂ ಮರು ಆರಂಭ ಆಗದ ಕಾರಣ ಸಾರ್ವಜನಿಕರು ಚಡಪಡಿಸುವಂತಾಗಿದೆ.

ತಾಲೂಕಿನ 20 ಗ್ರಾಮಗಳು ಪಕ್ಕದ ರಾಜ್ಯ ಆಂಧ್ರ ಪ್ರದೇಶಧ ಹಲವು ನಗರಗಳಿಗೆ ಸಂಪರ್ಕ ಇಟ್ಟುಕೊಂಡಿವೆ. ಇವುಗಳಿಗೆ ವೇದಾವತಿ ಹಗರಿ ನದಿ ಸೇತುವೆಯೇ ಕೊಂಡಿ. ಸಂಚಾರ ಸ್ಥಗಿತದಿಂದ ಈ 20 ಗ್ರಾಮಸ್ಥರಿಗೆ ತೊಂದರೆ ಎದುರಾಗಿದೆ. ಅನಿವಾರ್ಯವಾಗಿ ಕುಡುದರಹಾಳು ಹತ್ತಿರದ ಸೇತುವೆ ಮೇಲೆ ಸುತ್ತುವರಿದು ಪ್ರಯಾಣಿಸುತ್ತಿದ್ದಾರೆ.

ಕುಡುದರಹಾಳು ಸೇತುವೆಯ ಮೇಲೂ ಶನಿವಾರ ಮಧ್ಯಾಹ್ನದಿಂದ ನೀರು ಹರಿಯಲು ಆರಂಭವಾಗಿದ್ದರಿಂದ ಇದರ ಮೇಲಿನ ಸಂಚಾರಕ್ಕೂ ನಿರ್ಬಂಧ ಹಾಕಲಾಗಿತ್ತು. ಇದರಿಂದಾಗಿ ಮತ್ತಷ್ಟು ಸಮಸ್ಯೆ ಎದುರಾಗಿದೆ. ಹೊಸ ಸೇತುವೆ ನಿರ್ಮಾಣವೇ ಇದಕ್ಕೆ ಪರಿಹಾರ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net