ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನ, ಸೂಕ್ತ ಕ್ರಮಕ್ಕೆ ತಾಲೂಕು ಸಂಘ ಆಗ್ರಹ

221122 Siraguppa Bhrahimanna Comminity
ಸಿರಗುಪ್ಪ ತಾಲೂಕು ಬ್ರಾಹ್ಮಣ ಸಂಘದಿಂದ ಶಿರಸ್ತೇದಾರ್ ಸಿದ್ದಲಿಂಗಯ್ಯ ಸ್ವಾಮಿಗೆ ಮನವಿ ಸಲ್ಲಿಸಲಾಯಿತು.
Published on

ಸಿರಗುಪ್ಪ: ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿರುವ ಕಾಂಗ್ರೆಸ್ ಮುಖಂಡ ಮಲ್ಲೇಶ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಾಲೂಕು ಬ್ರಾಹ್ಮಣ ಸಂಘ ಶಿರಸ್ತೇದಾರ್ ಸಿದ್ದಲಿಂಗಯ್ಯ ಸ್ವಾಮಿಗೆ ಸೋಮವಾರ ಮನವಿ ಸಲ್ಲಿಸಿತು.

ಸಂಘದ ಅಧ್ಯಕ್ಷ ಜೋಯಿಸ್ ಶ್ರೀನಿವಾಸಮೂರ್ತಿ ಮಾತನಾಡಿ, ಮೈಸೂರಿನಲ್ಲಿ ನಡೆದ ಮಾಜಿ ಸಿಎಂ ಸಿದ್ದರಾಮಯ್ಯ-75 ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯರ ಆಪ್ತ ಮಲ್ಲೇಶ್ ಬ್ರಾಹ್ಮಣರ ಬಗ್ಗೆ ಅವಹೇಳನದ ಮಾತುಗಳನ್ನಾಡಿ ಸಮುದಾಯಕ್ಕೆ ನೋವುಂಟು ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ನಗರದ ವೇಣುಗೋಪಾಲ ಸ್ವಾಮಿ ದೇವಸ್ಥಾನದಿಂದ ತಹಸಿಲ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕುಲಕರ್ಣಿ, ಸದಸ್ಯರಾದ ಪ್ರಹ್ಲಾದರಾವ್, ಸಂಜಯಾಚಾರ್, ಪ್ರಾಣೇಶರಾವ್, ಜೆ.ನರಸಿಂಹಮೂರ್ತಿ, ರಾಘವೇಂದ್ರ, ಮಧ್ವಾಚಾರ್, ಕಿಶೋರ್ ಕುಮಾರ್, ವಾಮನರಾವ್, ಶಾಮಾಚಾರ್, ರಾಘವೇಂದ್ರಾಚಾರ್ ಪ್ರಕಾಶರಾವ್, ರಮೇಶ ಕುಲಕರ್ಣಿ, ಎಚ್.ಜೆ. ಶ್ರೀಧರ ಹನುಮಂತರಾವ್, ಎಚ್.ಜೆ. ವೆಂಕಟೇಶಾಚಾರ್, ದೀಪಾ, ವಾಸುಕಿ, ಆನಂದಿನಿ, ಸಂಯುಕ್ತ, ಶಶಿಕಲಾ, ವಾಣಿ, ಚಂದ್ರಿಕಾ, ರಾಧಾ, ಪರಿಮಳಾ, ಸಾವಿತ್ರಿ, ಶ್ರೇಯಾ, ಸಹನಾ, ಭಾಗ್ಯ, ವಿಜಯಲಕ್ಷ್ಮೀ, ಶ್ರೀಲಕ್ಷ್ಮೀ, ಬೃಂದಾ, ವೇಣುಗೋಪಾಲ ಜೋಶಿ, ಬಿ. ವಾದಿರಾಜಚಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net