ಆಟೋ ಪಲ್ಟಿಯಾಗಿ 28 ಜನರಿಗೆ ಗಾಯ

Sirguppa Accident
ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ತಹಸೀಲ್ದಾರ್ ಎಚ್.ವಿಶ್ವನಾಥ, ಗುರುವಾರ ಭೇಟಿ ನೀಡಿ, ಗಾಯಗೊಂಡ ಕಾರ್ಮಿಕರನ್ನು ವಿಚಾರಿಸಿದರು. ಕಂದಾಯ ಅಧಿಕಾರಿ ವಿರೂಪಾಕ್ಷಿ ಇದ್ದರು.
Published on

ಸಿರಗುಪ್ಪ: ತಾಲೂಕಿನ ಸಿರಿಗೇರಿಯಿಂದ ತೆಕ್ಕಲಕೋಟೆಗೆ ಬರುತ್ತಿದ್ದ ಕೃಷಿ ಕೂಲಿ ಕಾರ್ಮಿಕರ ಹೊತ್ತ ಆಟೋ ಬುಧವಾರ ಪಲ್ಟಿಯಾಗಿದ್ದು, 28 ಜನರಿಗೆ ಗಾಯಗಳಾಗಿವೆ. ಗಾಯಗೊಂಡ ಎಲ್ಲರನ್ನೂ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಮೂವರಿಗೆ ತೀವ್ರ ಪೆಟ್ಟಾಗಿದೆ.

ತೆಕ್ಕಲಕೋಟೆಯ ಕೃಷಿ ಕೂಲಿ ಕಾರ್ಮಿಕರು ಸಿರಿಗೇರಿ ಗ್ರಾಮದ ಹತ್ತಿರದ ಹೊಲಗಳಲ್ಲಿ ಭತ್ತದ ಸಸಿ ನಾಟಿ ಮಾಡಿ ಮರಳಿ ಬರುತ್ತಿದ್ದಾಗ ಮಾರ್ಗಮಧ್ಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ. ಮೂವರ ತಲೆಗೆ ತೀವ್ರ ಪೆಟ್ಟಾಗಿದೆ.

ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತೆಕ್ಕಲಕೋಟೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ವಿಮ್ಸ್ ಆಸ್ಪತ್ರೆಗೆ ತಹಸೀಲ್ದಾರ್ ಎಚ್.ವಿಶ್ವನಾಥ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಯಾರಿಗೂ ಯಾವುದೇ ಅಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net