ಹಲ್ಲೆಕೋರರ ಕೂಡಲೇ ಬಂಧಿಸಿ; ಸಿರಗುಪ್ಪ ತಾಲೂಕು ಸವಿತಾ ಸಮಾಜ ಸಂಘ ಒತ್ತಾಯ; ತಹಸೀಲ್ದಾರ್‌ಗೆ ಮನವಿ

31102022 siraguppa protest
Published on

ಸಿರಗುಪ್ಪ: ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರಾಘವೇಂದ್ರ ಅವರ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ತಾಲೂಕು ಸವಿತಾ ಸಮಾಜ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಯಿತು.

ಸಂಘದ ಕಾರ್ಯಕರ್ತರು ತಹಸೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿಗೆ ಮನವಿ ಸಲ್ಲಿಸಿ, ಹಲ್ಲೆಕೋರರನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿದರು. ಸವಿತಾ ಸಮಾಜ ಸಂಘದ ರಾಜ್ಯಾಧ್ಯಕ್ಷ ಮುತ್ತುರಾಜ ಮಾತನಾಡಿ, ನಮ್ಮ ಸಮಾಜವು ತಲೆ ತಲಾಂತರಗಳಿಂದ ಕ್ಷೌರಿಕ ವೃತ್ತಿಯನ್ನೇ ಮಾಡಿಕೊಂಡು ಬರುತ್ತಿದೆ. ಈ ವೃತ್ತಿಯಿಂದ ಹಲವಾರು ಕುಟುಂಬಗಳು ಬದುಕುತ್ತಿವೆ. ಆದರೆ, ಕಳೆದ ಕೆಲ ದಿನಗಳ ಹಿಂದೆ ನಮ್ಮ ಸಂಘದ ಬೈಲಾಕ್ಕೆ ವಿರುದ್ಧವಾಗಿ ನಗರದಲ್ಲಿ ಕೆಲವು ವ್ಯಕ್ತಿಗಳು ಹೊರರಾಜ್ಯದವರನ್ನು ಕರೆತಂದು ಕ್ಷೌರಿಕ ಅಂಗಡಿ ಪ್ರಾರಂಭಿಸಲು ವ್ಯವಸ್ಥೆ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ, ಶಾಂತಿಯುತ ಸಭೆ ನಡೆಸಿದ್ದೇವೆ. ಆದರೆ, ಸಭೆಯಲ್ಲಿ ಕ್ಷೌರಿಕ ವೃತ್ತಿಯನ್ನು ಅವಾಚ್ಯ ಶಬ್ದಗಳಿಂದ ಕೆಲವರು ನಿಂದಿಸಿದ್ದಾರೆ. ಅ.29ರ ಸಂಜೆ ಕೆಲ ಕಿಡಿಗೇಡಿಗಳು ನಮ್ಮ ಸಮಾಜದ ಸಂಘದ ತಾಲೂಕು ಅಧ್ಯಕ್ಷ ರಾಘವೇಂದ್ರ ಅವರ ಹತ್ಯೆಗೆ ಯತ್ನ ಮಾಡಿದ್ದಾರೆ. ಆದ್ದರಿಂದ ಹಲ್ಲೆಕೋರರನ್ನು ಬಂಧಿಸಿ, ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net