ಪ್ಯಾಕೇಜ್‌ ಖಾತೆಗಳಾಗಿ ಬದಲಾಗಲಿ - ಸ.ನೌ.ಸಂಘದಿಂದ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ

ಸಿರಗುಪ್ಪ ಬಿ.ಡಿ.ಸಿ.ಸಿ ವ್ಯವಸ್ಥಾಪಕ ಸಂಗನಗೌಡ ಜಾಗೀರದಾರಗೆ ಸರ್ಕಾರಿ ನೌಕರರ ಸಂಘದಿಂದ ಮನವಿ ಸಲ್ಲಿಸಲಾಯಿತು. ಸಂಘದ ತಾಲೂಕು ಅಧ್ಯಕ್ಷ ಟಿ.ಹುಚ್ಚೀರಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಡಾ. ಕೆ.ಎಂ ಚಂದ್ರಕಾಂತ, ಗೌರವ ಅಧ್ಯಕ್ಷ ವೆಂಕಟೇಶ, ಕಾರ್ಯಾಧ್ಯಕ್ಷ ಯೇಸಣ್ಣ, ಖಜಾಂಚಿ ಎಚ್.ದುರುಗಪ್ಪ, ಉಪಾಧ್ಯಕ್ಷರಾದ ಚಂದಾ ಸಾಹೇಬ್, ಅನಿತಾ ಇತರರಿದ್ದರು.

Published on

ಸಿರಗುಪ್ಪ: ಉಳಿತಾಯ ಖಾತೆಯನ್ನು ಸಂಬಳ ಪ್ಯಾಕೇಜ್ ಖಾತೆಯಾಗಿ ಬದಲಾಯಿಸುವಂತೆ ಕೋರಿ ಸರ್ಕಾರಿ ನೌಕರರ ಸಂಘದಿಂದ ಪಟ್ಟಣದ ಎಸ್‌ಬಿಐ ವ್ಯವಸ್ಥಾಪಕ ವೀರಾಂಜನೇಯಲು ಹಾಗೂ ಬಿಡಿಸಿಸಿ ವ್ಯವಸ್ಥಾಪಕ ಸಂಗನಗೌಡ ಜಾಗೀರದಾರ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನ ಸರ್ಕಾರಿ ನೌಕರರು ತಮ್ಮ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಗಳನ್ನು ಹೊಂದಿದ್ದು, ಸದರಿ ಖಾತೆಗಳಿಂದ ಮಾಸಿಕ ವೇತನ ಪಡೆಯುತ್ತಿದ್ದೇವೆ. ಕಾರಣ ಸರ್ಕಾರಿ ಆದೇಶದಂತೆ ಸರ್ಕಾರಿ ನೌಕರರಿಗೆ ಸಾಮಾಜಿಕ ಮತ್ತು ಕುಟುಂಬದ ಭದ್ರತೆಯ ಹಿತದೃಷ್ಟಿಯಿಂದ ನೌಕರರ ಉಳಿತಾಯ ಖಾತೆಗಳನ್ನು ಸಂಬಳ ಪ್ಯಾಕೇಜ್ ಖಾತೆಗಳಾಗಿ ಬದಲಾಯಿಸಿ ಸರ್ಕಾರಿ ಅಧಿಕಾರಿ, ನೌಕರರಿಗೆ ಮತ್ತು ಅವರ ಕುಟುಂಬದವರಿಗೆ ವಿಶೇಷ ರಿಯಾಯಿತಿಗಳು, ಅಪಘಾತ ವಿಮೆ ಮತ್ತು ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸಿಕೊಡುವಂತೆ ಕೇಳಿದರು. ನಂತರ ಸರ್ಕಾರಿ ನೌಕರರು ಬ್ಯಾಂಕ್ ವ್ಯವಸ್ಥಾಪಕರು, ಸರ್ಕಾರಿ ನೌಕರರಿಗೆ ಬ್ಯಾಂಕ್‌ಗಳಿಂದ ಪ್ರಸ್ತುತ ಲಭ್ಯವಿರುವ ಸೌಲಭ್ಯಗಳಬಗ್ಗೆ ಮಾಹಿತಿ, ವಿವರಗಳನ್ನು ಪಡೆದರು.

ಸಂಘದ ತಾಲೂಕು ಅಧ್ಯಕ್ಷ ಟಿ.ಹುಚ್ಚೀರಪ್ಪ, ಪ್ರಧಾನ ಕಾರ್ಯದರ್ಶಿ ಡಾ. ಕೆ.ಎಂ ಚಂದ್ರಕಾಂತ, ಗೌರವಾಧ್ಯಕ್ಷ ವೆಂಕಟೇಶ, ಕಾರ್ಯಾಧ್ಯಕ್ಷ ಯೇಸಣ್ಣ, ಖಜಾಂಚಿ ಎಚ್.ದುರುಗಪ್ಪ, ಉಪಾಧ್ಯಕ್ಷರಾದ ಚಂದಾ ಸಾಹೇಬ್, ಅನಿತಾ, ನಿರ್ದೇಶಕಾರದ ಶೇಖರ್ ರೆಡ್ಡಿ, ಸಿ ವಿಜಯ್, ಗಜೇಂದ್ರ, ಪಾಲಪ್ಪ ಸದಸ್ಯರಾದ ಮಲ್ಲಯ್ಯ, ಮಂಜುನಾಥ ಗೌಡ, ಹನುಮಂತಪ್ಪ, ಕಾಡಸಿದ್ದಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net