ಸಿರಗುಪ್ಪ ಎಪಿಎಂಸಿಗೆ ಸ್ಥಳಾಂತರ ಮಾಡದಂತೆ ಬೀದಿಬದಿ ವ್ಯಾಪಾರಿಗಳ ಒತ್ತಾಯ, ಗ್ರೇಡ್ 2 ತಹಸೀಲ್ದಾರ್‌ಗೆ ಮನವಿ

230720 Siriguppa Street Side Traders Appeal
ಸಿರಗುಪ್ಪದದಲ್ಲಿ ಗ್ರೇಡ್-2 ತಹಸೀಲ್ದಾರ್ ವಿಶ್ವನಾಥಗೆ ಬೀದಿ ಬದಿ ವ್ಯಾಪಾರಿಗಳು ಮನವಿ ಸಲ್ಲಿಸಿದರು.
Published on

ಸಿರಗುಪ್ಪ: ನಗರದ ಪ್ರಮುಖ ರಸ್ತೆಗಳ ಬೀದಿ ಬದಿಯಲ್ಲಿ ಹಣ್ಣು ಮತ್ತು ಹೂ ಮಾರುವವರನ್ನು ಎಪಿಎಂಸಿಗೆ ಸ್ಥಳಾಂತರಿಸದಂತೆ ಆಗ್ರಹಿಸಿ ಗ್ರೇಡ್ 2 ತಹಸೀಲ್ದಾರ್ ವಿಶ್ವನಾಥಗೆ ಬೀದಿ ಬದಿ ವ್ಯಾಪಾರಿಗಳು ಬುಧವಾರ ಮನವಿ ಸಲ್ಲಿಸಿದರು.

ವ್ಯಾಪಾರಿ ಪಿ.ರಹೀಂ ಮಾತನಾಡಿ, ನಗರದ ಬಳ್ಳಾರಿ-ಸಿಂಧನೂರು ರಸ್ತೆಯಲ್ಲಿ ಹಲವು ವರ್ಷಗಳಿಂದ ಬೀದಿ ಬದಿಯಲ್ಲಿ ಹಣ್ಣು ಮತ್ತು ಹೂ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಕರೊನಾ ಲಾಕ್‌ಡೌನ್‌ನಿಂದ ನಮ್ಮ ಕುಟುಂಬದ ನಿರ್ವಹಣೆ ತುಂಬ ಹದಗೆಟ್ಟಿದೆ. ಇಂತಹ ಸಂದರ್ಭ ನಗರಸಭೆ ನಗರದಿಂದ 2 ಕಿಮೀ ದೂರದಲ್ಲಿರುವ ಎಪಿಎಂಸಿಗೆ ಸ್ಥಳಾಂತರ ಮಾಡಲು ಸೂಚಿಸಿದ್ದಾರೆ. ಜನಸಂದಣಿಯೇ ಇಲ್ಲದ ಅಲ್ಲಿ ಯಾರು ವ್ಯಾಪಾರ ಮಾಡಲು ಬರುವುದಿಲ್ಲ. ಅಲ್ಲಿಗೆ ಹೋಗುವುದರಿಂದ ನಮ್ಮ ಕುಟುಂಬಗಳು ಬೀದಿ ಪಾಲಾಗುತ್ತವೆ. ಈ ದಿಸೆಯಲ್ಲಿ ನಗರದ ರಸ್ತೆ ಬದಿಯಲ್ಲೇ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಬೀದಿ ಬದಿ ವ್ಯಾಪಾರಿಗಳಾದ ನೂರ್‌ಬಾಷಾ, ಶಿವು, ಎಂ.ಮಾಬು, ಗಂಗಾಧರ, ದಾದಾ ಖಲಂದರ್, ಜಿ.ವೀರೇಶ, ಮುನ್ನಾ, ಸಾಧಿಕ್, ಸಿ.ಎ.ಸಲಾಂ, ಬಿ.ಉಸ್ಮಾನ್, ಷರೀಫ್, ಇಸ್ಮಾಯಿಲ್, ಚಾಂದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net