ಅಂಕು-ಡೊಂಕು ತಿದ್ದಿದ ನಿಜಶರಣ ಅಂಬಿಗರ ಚೌಡಯ್ಯ

210122 Siraguppa Ambigara Chaudayya Jayanti
ಸಿರಗುಪ್ಪ ನಗರದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ ಮಾತನಾಡಿದರು.
Published on

ಸಿರಗುಪ್ಪ: ನಿಜಶರಣ ಅಂಬಿಗರ ಚೌಡಯ್ಯ ಅಂಬಿಗ ವೃತ್ತಿ ಜತೆ ವಚನಗಳ ಮೂಲಕ ಸಮಾಜದ ಅಂಕು-ಡೊಂಕು ತ್ತಿದ್ದಿದವರು ಎಂದು ತಹಸೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ ಹೇಳಿದರು.

ನಗರದ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಶುಕ್ರವಾರ ಆಯೋಜಿಸಿದ್ದ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾಜಿಕವಾಗಿ ಉನ್ನತ ಸ್ಥಾನ ಡೆಯಬೇಕಾದರೆ ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯಬೇಕು ಎಂದರು.

ಉಪನ್ಯಾಸಕ ಭೀಮಲಿಂಗಪ್ಪ ಶ್ರಿ ಅಂಬಿಗರ ಚೌಡಯ್ಯನವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹಮದ್, ಬಿಸಿಎಂ ಇಲಾಖೆಯ ಅಧಿಕಾರಿ ಎ.ಗಾದಿಲಿಂಗಪ್ಪ, ಸಮಾಜ ಕಲ್ಯಾಣ ಇಲಾಖೆ ತಾ.ಅಧಿಕಾರಿ ಎಂ.ಸಿದ್ದಯ್ಯ, ಮುಖಂಡರಾದ ಎಂ.ಎಸ್.ವೆಂಕಟಪ್ಪ, ಆರ್.ಸಿ.ಪಂಪನಗೌಡ, ದಮ್ಮೂರು ಸೋಮಪ್ಪ, ಆರ್.ನಾಗರಾಜ, ಗಂಗಾಮತ ಸಂಘದ ತಾ.ಅಧ್ಯಕ್ಷ ದೇವೇಂದ್ರಪ್ಪ, ಗೌರವಾಧ್ಯಕ್ಷ ಕೆ.ಹುಲುಗಪ್ಪ, ಉಪಾಧ್ಯಕ್ಷ ಎಸ್.ಮುದುಕಪ್ಪ, ಪ್ರಧಾನ ಕಾರ್ಯದರ್ಶಿ ಕೆ.ವೆಂಕಟೇಶ, ಮುಖಂಡರಾದ ಕೆ.ಸುಂಕಪ್ಪ, ಬಿ.ಮಾರೆಣ್ಣ, ಬಿ.ವೆಂಕೋಬ, ಕೆ.ಷಣ್ಮುಖ, ಅಮಾಜಪ್ಪ, ಕೆ.ಹನುಮೇಶ, ಜಿ.ಪರಮೇಶ, ಎಸ್.ಮಹೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net