ನಮ್ಮ ಭಾಷೆ ಅಳಿಸಲು ಸಾಧ್ಯವಿಲ್ಲ, ಶಾಸಕ ಎಂ.ಎಸ್.ಸೋಮಲಿಂಗಪ್ಪ

011122 Siraguppa Rajyothsava
ಸಿರಗುಪ್ಪದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವನ್ನು ಶಾಸಕ ಎಂ.ಎಸ್.ಸೋಮಲಿಂಗಪ್ಪ ಉದ್ಘಾಟಿಸಿದರು. ವಿವಿಧ ವೇಷ ಧರಿಸಿ ಗಮನ ಸೆಳೆದ ಸಿರಗುಪ್ಪ ವಿದ್ಯಾರ್ಥಿಗಳು.
Published on

ಸಿರಗುಪ್ಪ: ಪುರಾತನ ಕಾಲದಿಂದಲೂ ಬಂದ ಕನ್ನಡ ಭಾಷೆಯನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.

ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಭಾಷೆಯನ್ನು ಇನ್ನಷ್ಟು ಬೆಳೆಸಲು ಎಲ್ಲರೂ ನಿತ್ಯ ಕನ್ನಡ ಭಾಷೆಯಲ್ಲೇ ವ್ಯವಹರಿಸಬೇಕು. ನಂತರ ಪ್ರಾಪಂಚಿಕ ಜ್ಞಾನಕ್ಕಾಗಿ ಇತರೆ ಭಾಷೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ತಹಸೀಲ್ದಾರ್ ಎನ್.ಅರ್.ಮಂಜುನಾಥಸ್ವಾಮಿ, ತಾಪಂ ಇಒ ಎಂ.ಬಸಪ್ಪ, ಬಿಇಒ ಪಿ.ಡಿ.ಭಜಂತ್ರಿ ಮಾತನಾಡಿದರು. ವಿದ್ಯಾರ್ಥಿಗಳು ಕನ್ನಡ ಗೀತೆಗಳಿಗೆ ನೃತ್ಯ ಪ್ರದರ್ಶನ ಮಾಡಿದರು. ನಾನಾ ವಿದ್ಯಾರ್ಥಿಗಳು ಪುರಂದರದಾಸರು, ಕನಕದಾಸರು, ಬುದ್ಧ್ದ, ಶ್ರೀ ಕೃಷ್ಣದೇವರಾಯ, ತೆನಾಲಿರಾಮಕೃಷ್ಣ, ಕನ್ನಡಾಂಬೆ, ಮಹಾತ್ಮ ಗಾಂಧೀಜಿ ಮುಂತಾದ ಮಹನೀಯರ ವೇಷ ಧರಿಸಿ ಗಮನ ಸೆಳೆದರು.

ಸಿಡಿಪಿಒ ಎ.ಕೆ.ಜಲಾಲಪ್ಪ, ಬಿಸಿಎಂ ಇಲಾಖೆ ಅಧಿಕಾರಿ ಎ.ಗಾದಿಲಿಂಗಪ್ಪ, ತೋಟಗಾರಿಕೆ ಇಲಾಖೆ ಅಧಿಕಾರಿ ಮಹೇಶ, ಟಿ.ಎಚ್.ಒ. ಈರಣ್ಣ, ಪೌರಾಯುಕ್ತ ಪ್ರೇಮ್‌ಚಾರ್ಲ್ಸ್, ಡಿವೈಎಸ್‌ಪಿ ಸತ್ಯನಾರಾಯಣರಾವ್, ಸಿಪಿಐ ಯಶವಂತಬಿಸ್ನಳ್ಳಿ, ಪಿಎಸ್‌ಐ ರಂಗಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net