ಸಿರಗುಪ್ಪ ತಾಲೂಕಿನಾದ್ಯಂತ ಸುರಿದ ಮಳೆ, ಐದು ಕಡೆ ಮನೆ ಕುಸಿತ

290822 Konchigeri Village House Collapse
ಸಿರಗುಪ್ಪ ತಾಲೂಕಿನ ಕೊಂಚಿಗೇರಿ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಸುರಿದ ಮಳೆಯಿಂದಾಗಿ ಭಾಗಶಃ ಮನೆ ಕುಸಿದಿರುವುದು.
Published on

ಸಿರಗುಪ್ಪ: ತಾಲೂಕಿನಾದ್ಯಂತ ಭಾನುವಾರ ಬೆಳಗಿನ ಜಾವ ಸುರಿದ ಮಳೆಯಿಂದಾಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಐದು ಮನೆಗಳು ಭಾಗಶಃ ಕುಸಿದಿವೆ. ತೆಕ್ಕಲಕೋಟೆಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನೀರು ನಿಂತು ಮೈದಾನ ಕೆರೆಯಂತಾಗಿದೆ. ಮೈದಾನದಲ್ಲಿನ ನೀರನ್ನು ಚರಂಡಿಗೆ ಹರಿಸಲು ಪಪಂ ಸಿಬ್ಬಂದಿ ಯತ್ನಿಸಿದರೂ ಪ್ರಯೋಜನವಾಗಿಲ್ಲ. ಮಳೆ ಹಾನಿ ಬಗ್ಗೆ ಮಾತನಾಡಿದ ತಹಸೀಲ್ದಾರ್ ಎನ್.ಆರ್.ಮಂಜುನಾಥ ಸ್ವಾಮಿ, ಐದು ಮನೆಗಳು ಭಾಗಶಃ ಕುಸಿದಿದ್ದು ಬಿಟ್ಟರೆ ಯಾವುದೇ ಆಸ್ತಿ, ಪ್ರಾಣಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ. ತೆಕ್ಕಲಕೋಟೆಯಲ್ಲಿ 82.2ಮಿ.ಮೀ, ಕೆ.ಬೆಳಗಲ್ಲಲ್ಲಿ 72.6, ಎಂ.ಸೂಗೂರಲ್ಲಿ 28.6, ಸಿರಿಗೇರಿಯಲ್ಲಿ 17.2, ಕರೂರಲ್ಲಿ 16.8, ಹಚ್ಚೊಳ್ಳಿಯಲ್ಲಿ 12 ಮಿ.ಮೀ. ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net