ಶಿರಾ ಬೈಎಲೆಕ್ಷನ್: ಮತಎಣಿಕೆ ಕೇಂದ್ರದ ಮುಂದೆ ಪಕ್ಷೇತರ ಅಭ್ಯರ್ಥಿಯಿಂದ ಪ್ರತಿಭಟನೆ

Candidates
Published on

ತುಮಕೂರು: ಶಿರಾ ಬೈಎಲೆಕ್ಷನ್ ಪಕ್ಷೇತರ ಅಭ್ಯರ್ಥಿ ಆಂಬ್ರೋಸ್ ಡಿ.ಮೆಲ್ಲೊ ಮತ ಎಣಿಕೆ ಕೇಂದ್ರದೊಳಗೆ ತಮ್ಮನ್ನು ಬಿಡುತ್ತಿಲ್ಲವೆಂದು ಆರೋಪಿಸಿ ಎಣಿಕೆ ಕೇಂದ್ರದ ಆವರಣದಲ್ಲಿ ಪ್ರತಿಭಟಿಸಿದರು.

ಪ್ರಗತಿಪರ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಆಂಬ್ರೋಸ್ ಮತ ಎಣಿಕೆ ಪ್ರವೇಶಿಸುವ ವೇಳೆ ಪೊಲೀಸರು ತಡೆದ ಹಿನ್ನೆಲೆಯಲ್ಲಿ ಮೌನ ಪ್ರತಿಭಟನೆ ನಡೆಸಿದರು. ನಂತರ ಡಿವೈಎಸ್ಪಿ ತಿಪ್ಪೇಸ್ವಾಮಿ ಪರಿಸ್ಥಿತಿ ಅರಿತು ಡಿ.ಮೆಲ್ಲೋ ಅವರನ್ನು ಮತ ಎಣಿಕೆ ಕೇಂದ್ರಕ್ಕೆ ಕಳುಹಿಸಿಕೊಟ್ಡರು.

ನೀರು ಮಾರಾಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮೌನ ಪ್ರತಿಭಟನೆ ನಡೆಸುತ್ತಿರುವ ಆಂಬ್ರೋಸ್ ಚಿರಪರಿಚಿತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net