ಸರ್ ಸಿದ್ದಪ್ಪ ಕಂಬಳಿ ಮೂರ್ತಿ ಲೋಕಾರ್ಪಣೆ 21ರಂದು

19-MDG- 2 PM
Published on

ಮುಂಡರಗಿ: ಪಟ್ಟಣದ ಕೋಟೆಭಾಗದ ಸರ್ ಸಿದ್ದಪ್ಪ ಕಂಬಳಿ ವೃತ್ತದಲ್ಲಿ ಸರ್ ಸಿದ್ದಪ್ಪ ಕಂಬಳಿ ಪ್ರತಿಷ್ಠಾನ ಹಾಗೂ ಸರ್ ಸಿದ್ದಪ್ಪ ಕಂಬಳಿ ಮೂರ್ತಿ ನಿರ್ಮಾಣ ಸಮಿತಿ ಸಹಯೋಗದಲ್ಲಿ ಸೆ. 21ರಂದು ಬೆಳಗ್ಗೆ 10 ಗಂಟೆಗೆ ಸರ್ ಸಿದ್ದಪ್ಪ ಕಂಬಳಿ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಮಂಜುನಾಥ ಇಟಗಿ ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ ಅಧ್ಯಕ್ಷತೆ ವಹಿಸುವರು. ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸುವರು. ಶಾಸಕ ಡಾ.ಚಂದ್ರು ಲಮಾಣಿ ಮೂರ್ತಿ ಅನಾವರಣಗೊಳಿಸುವರು. ಸರ್ ಸಿದ್ದಪ್ಪ ಕಂಬಳಿ ಮೂರ್ತಿ ದಾಸೋಹಿಗಳಾದ ಮಾಜಿ ಸಚಿವ ಕಳಕಪ್ಪ ಬಂಡಿ ಹಾಗೂ ಪ್ರಪ್ರಥಮವಾಗಿ ಮೂರ್ತಿ ಪ್ರತಿಷ್ಠಾಪಿಸಿದ್ದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ಅವರನ್ನು ಸತ್ಕರಿಸಲಾಗುವುದು ಎಂದರು.

ಧಾರವಾಡ ಕಸಾಪ ಗೌರವ ಕಾರ್ಯದರ್ಶಿ ಪೊ›.ಕೆ.ಎಸ್. ಕೌಜಲಗಿ ಉಪನ್ಯಾಸ ನೀಡುವರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಇತರರು ಪಾಲ್ಗೊಳ್ಳಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಪೊ›.ಆರ್.ಎಲ್. ಪೊಲೀಸಪಾಟೀಲ, ಪೊ›.ಎಂ.ಜಿ. ಗಚ್ಚಣ್ಣವರ, ಮಂಜುನಾಥ ಮುಧೋಳ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net