ಬರಡು ನೆಲ ಬಂಗಾರವಾಗಿಸಿದ ಸರ್ ಎಂ. ವಿಶ್ವೇಶ್ವರಯ್ಯ

ENGINEER
Published on

ನರಗುಂದ: ಬರಡಾಗಿದ್ದ ನಾಡು ಸರ್ ಎಂ. ವಿಶ್ವೇಶ್ವರಯ್ಯನವರ ಶ್ರಮದ ಫಲವಾಗಿ ಬಂಗಾರವಾಯಿತು. ವಿಶ್ವೇಶ್ವರಯ್ಯನವರು ಕರುನಾಡಿಗೆ ನೀಡಿದ ಕೊಡುಗೆ ಅಮೋಘವಾದುದು ಎಂದು ನರಗುಂದ ಪಂಚಾಯತ್ ರಾಜ್ ಇಲಾಖೆ ಉಪ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಎನ್.ವೈ. ಬೇವಿನಗಿಡದ ಹೇಳಿದರು.

ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಇಂಜಿನಿಯರ್ ದಿನಾಚಾರಣೆಯಲ್ಲಿ ಅವರು ಮಾತನಾಡಿದರು.

ಆಧುನಿಕ ಭಾರತದ ನಿರ್ಮಾಪಕರಾದ ವಿಶ್ವೇಶ್ವರಯ್ಯನವರು ಆಣೆಕಟ್ಟು, ಉಕ್ಕಿನ ಕಾರ್ಖಾನೆ, ಬ್ಯಾಂಕ್ ಹಾಗೂ ಕಾಲೇಜು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಕರ್ನಾಟಕದ ಕೀರ್ತಿಯನ್ನು ಜಗತ್ತಿಗೆ ಸಾರಿದ ನವಭಾರತದ ಶ್ರೇಷ್ಠ ಇಂಜಿನಿಯರ್ ಎಂದರು.

ಶಾಂತಲಿಂಗ ಶ್ರೀಗಳು ಮಾತನಾಡಿ, ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ, ಅಮರ ವಾಸ್ತು ಶಿಲ್ಪಿಯಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯನವರು ನಮಗೆಲ್ಲ ಆದರ್ಶರು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಅವರು ಕನ್ನಡ ನಾಡು-ನೆಲ-ಜಲದ ಬಗ್ಗೆ ಅಪರಾವಾದ ಅಭಿಮಾನ ಹೊಂದಿದ್ದರು. ನೀರಾವರಿ ಕ್ರಾಂತಿಗೆ ಮುನ್ನುಡಿ ಬರೆದ ಆಣೆಕಟ್ಟುಗಳ ನಿರ್ಮಾತೃ ಎಂದು ತಿಳಿಸಿದರು.

ನರಗುಂದದ ಪಂಚಾಯತ್ ರಾಜ್ ಉಪವಿಭಾಗದ ಸಿಇಇ ಎನ್.ವೈ. ಬೇವಿನಗಿಡದ, ಇಂಜಿನಿಯರ್ ಅನೀಲಕುಮಾರ ಜಗತ್ತಾಪ, ಎಂ.ಡಿ. ಅಗಸಿಮನಿ ಅವರನ್ನು ಸತ್ಕರಿಸಲಾಯಿತು. ವಿ.ಕೆ. ಪಾಟೀಲ, ಪ್ರೊ.ಆರ್.ಬಿ. ಚಿನಿವಾಲರ ಇತರರಿದ್ದರು. ಮಹಾಂತೇಶ ಹಿರೇಮಠ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net