

ಬೆಂಗಳೂರು: ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಜಿನಿಯರ್‌ಗಳು ಕಠಿಣ ಪರಿಸ್ಥಿಯಲ್ಲಿ ಕಾರ್ಯನಿರ್ವಹಿಸಿ ಅವಿರತ ಸೇವೆ ಸಲ್ಲಿಸುತ್ತಿದ್ದು, ಸಿಬ್ಬಂದಿಗಳ ಕೊರತೆಯ ಮಧ್ಯೆಯೂ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಭಿಪ್ರಾಯಪಟ್ಟರು.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಪಾಲಿಕೆಯ ಆವರಣದಲ್ಲಿರುವ ನೌಕರರ ಭವನದದಲ್ಲಿ ಬುಧವಾರ ಆಯೋಜಿಸಿದ್ದ ಸರ್ ಎಂ.ವಿ. ಜಯಂತಿ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅಭಿಯಂತರರು ಕಠಿಣ ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಿಸಿ ಅವಿರತ ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ, ದೇಶ ಕಟ್ಟಲು ಅಭಿಯಂತರರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಆಡಳಿತದ ಜತೆ ಇಂಜಿನಿಯರ್‌ಗಳು ಕೈ ಜೋಡಿಸಿದರೆ ಉತ್ತಮ ನಾಡು ಕಟ್ಟಲು ಸಾಧ್ಯ ಎಂದು ಪ್ರತಿಪಾದಿಸಿದರು.
ವಿಶ್ವೇಶ್ವರಯ್ಯನವರು ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸಿದ್ದು, ಅವರ ಸಾಕಷ್ಟು ಕೆಲಸಗಳು ಇಂದಿಗೂ ಶಾಶ್ವತವಾಗಿ ಉಳಿದಿವೆ. ರಾಜ್ಯ ಶ್ರೀಮಂತಗೊಳಿಸಲು ರಾಜರು ಹಾಗೂ ವಿಶ್ವೇಶ್ವರಯ್ಯ ಅವರು ನೀಡಿರುವ ಕೊಡುಗೆ ಅಪಾರ. ವಿಶ್ವೇಶ್ವರಯ್ಯ ಸ್ಮರಣೆ ಹಿನ್ನೆಲೆಯಲ್ಲಿ ಪಾಲಿಕೆಯ ಸಾಧಕ ಇಂಜನಿಯರ್‌ಗಳನ್ನು ಸನ್ಮಾನಿಸಲಾಗಿದೆ. ಇಂಜಿನಿಯರ್ ಅಲ್ಲದೆ ಪೌರಕಾರ್ಮಿಕರು, ವೈದ್ಯರು ಸೇರಿ ಇನ್ನಿತರ ವಿಭಾಗಲ್ಲಿ ಕಾರ್ಯನಿರ್ವಹಿಸುತ್ತಿರುವವರ ಸೇವೆಯನ್ನು ಸ್ಮರಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲಿಕೆಯ ವಿಶೇಷ ಆಯುಕ್ತರುಗಳಾದ ಡಾ. ಕೆ.ಹರೀಶ್ ಕುಮಾರ್, ಅವಿನಾಶ್ ಮೆನನ್‌ರಾಜೇಂದ್ರನ್ ಉಪ ಆಯುಕ್ತ ಮಂಜುನಾಥಸ್ವಾಮಿ, ಪ್ರಧಾನ ಅಭಿಯಂತರ ಬಿ.ಎಸ್. ಪ್ರಹ್ಲಾದ್, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಸೇರಿ ಇನ್ನಿತರರು ಹಾಜರಿದ್ದರು.
ಸರ್ ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ಪುರಸ್ಕೃತರು:
1. ಸುಗುಣ, ಮುಖ್ಯ ಅಭಿಯಂತರರು (ಪೂರ್ವ ವಲಯ)
2. ಬಸವರಾಜ್ ಕಬಾಡೆ, ಮುಖ್ಯ ಪ್ರಧಾನ ವ್ಯವಸ್ಥಾಪಕರು(ಬಿಎಸ್‌ಡಬ್ಲ್ಯುಎಂಎಲ್)
3. ಎಚ್.ಎಸ್. ಮಹದೇಶ್, ಅಧೀಕ್ಷಕ ಅಭಿಯಂತರ
4. ರೂಪೇಶ್, ಕಾರ್ಯಪಾಲಕ ಅಭಿಯಂತರ
5. ಮುನಿರೆಡ್ಡಿ, ಕಾರ್ಯಪಾಲಕ ಅಭಿಯಂತರ
6. ಎಲ್.ವೆಂಕಟೇಶ್, ಕಾರ್ಯಪಾಲಕ ಅಭಿಯಂತರ (ಕೆರೆ ವಿಭಾಗ)
7. ರಾಮಚಂದ್ರಪ್ಪ ಎಚ್.ಎಸ್, ಕಾರ್ಯಪಾಲಕ ಅಭಿಯಂತರ (ಜೆಡಿಟಿಪಿ, ದಕ್ಷಿಣ ವಲಯ)
8. ರಾಜಣ್ಣ, ಕಾರ್ಯಪಾಲಕ ಅಭಿಯಂತರ (ಟಿವಿಸಿಸಿ)
9. ಬಿ. ಶರತ್, ಕಾರ್ಯಪಾಲಕ ಅಭಿಯಂತರ (ಎಂಪಿಇಡಿ)
10. ಬಿ.ಎನ್.ಪ್ರದೀಪ್, ಕಾರ್ಯಪಾಲಕ ಅಭಿಯಂತರ
11. ಅಶಾ, ಕಾರ್ಯಪಾಲಕ ಅಭಿಯಂತರ
12. ಚಂದ್ರಶೇಖರ್ ನಾಯಕ್, ಸಹಾಯಕ ಅಭಿಯಂತರ (ಟಿಡಿಆರ್)