

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ನಗರದಲ್ಲಿ ಸೋಮವಾರ ಇಂಜಿನಿಯರ್ ದಿನವನ್ನು ಆಚರಿಸಲಾಯಿತು.
ಪಾಲಿಕೆ ವಿದ್ಯುತ್ ವಿಭಾಗದ ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಎನ್. ಗಣಾಚಾರಿ ಮಾತನಾಡಿ, ಸರ್ ಎಂ. ವಿಶ್ವೇಶ್ವರಯ್ಯ ಅವರು ಭಾರತ ಕಂಡ ಶ್ರೇಷ್ಠ ಇಂಜಿನಿಯರ್. ಆಗಿನ ಕಾಲದಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾನ ಬಳಸಿದ್ದರು ಎಂದು ಸ್ಮರಿಸಿದರು.
ವಿದ್ಯುತ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಗವಿಸಿದ್ದಯ್ಯ ಹಿರೇಮಠ ಮಾತನಾಡಿ, ಸರ್ ಎಂವಿ ಅವರು ಇಂಜಿನಿಯರ್ ಮಾತ್ರವಾಗಿರದೇ ಆರ್ಥಿಕ ತಜ್ಞರೂ ಆಗಿದ್ದರು. ಕೈಗಾರಿಕಾ ಕ್ರಾಂತಿಯ ಹರಿಕಾರರೂ ಹೌದು ಎಂದು ಗುಣಗಾನ ಮಾಡಿದರು.
ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಾಲಿಕೆ ವಿದ್ಯುತ್ ವಿಭಾಗದ ಇಂಜಿನಿಯರ್‌ಗಳಾದ ಮಲ್ಲೇಶ ಹಂಜಗಿ, ರಮೇಶ ಕುರಹಟ್ಟಿ, ಪ್ರವೀಣ ಹಡಗಲಿ, ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರಾದ ಫರ‌್ಹಾನ ದೇವಗಿರಿ, ಸಚಿನ್ ಹರಿವಾಣ, ಇರ್ಷಾದ್ ನಾಗನೂರು, ಮಂಜುನಾಥ ಸಿಟದೇ, ಅಶೋಕ, ಸಂತೋಷ, ಉಮಾಶಂಕರ ಹಿರೇಮಠ ಮುಂತಾದವರಿದ್ದರು.