ಪಾಪ, ಪುಣ್ಯಗಳೇ ದೇಹದ ಗುರುತು

ನಾವು ವಾಡಿದ ಪಾಪ, ಪುಣ್ಯಗಳೇ ನಮಗೆ ಮರಳಿ ಬರುತ್ತದೆ. ಅವುಗಳಿಗೆ ಅನುಗುಣವಾಗಿ ನಮ್ಮ ದೇಹದಲ್ಲಿ ಗುರುತು ಮೂಡುತ್ತದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾವೇಶ್ವರ ಭಾರತೀ ಸ್ವಾಮಿಜಿ ಹೇಳಿದ್ದಾರೆ.
navarathri namasya
ಶ್ರೀ ರಾವೇಶ್ವರ ಭಾರತೀ ಸ್ವಾಮಿಜಿ folder
Published on: 

ಬೆಂಗಳೂರು: ನಾವು ವಾಡಿದ ಪಾಪ, ಪುಣ್ಯಗಳೇ ನಮಗೆ ಮರಳಿ ಬರುತ್ತದೆ. ಅವುಗಳಿಗೆ ಅನುಗುಣವಾಗಿ ನಮ್ಮ ದೇಹದಲ್ಲಿ ಗುರುತು ಮೂಡುತ್ತದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾವೇಶ್ವರ ಭಾರತೀ ಸ್ವಾಮಿಜಿ ಹೇಳಿದ್ದಾರೆ.

ನಗರದ ಗಿರಿನಗರದಲ್ಲಿನ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ಆಯೋಜಿಸಿರುವ ‘ನವರಾತ್ರಿ ನಮಸ್ಯಾ’ ಕಾರ್ಯಕ್ರಮದ ಲಲಿತೋಪಾಖ್ಯಾನ ಪ್ರವಚನದಲ್ಲಿ ಆಶೀರ್ವಚನ ನೀಡಿದರು. ಗುರುತು ಆಧರಿಸಿಯೇ ವಿಧಿಯು ಫಲಾಲಗಳನ್ನು ನೀಡುತ್ತದೆ. ಈ ಕ್ರೀಡೆಯಲ್ಲಿ ಅಂತಿಮವಾಗಿ ತೀರ್ಪು ನೀಡುವುದು ಮಾತ್ರ ದೇವರು ಎಂದರು.

ಇಂದಿನ ತಂತ್ರಜ್ಞರು ಕಪ್ಪು ಪರದೆ ಮೇಲೆ ಬರೆಯುವ ಕೋಡಿಂಗ್ ಜನಸಾವಾನ್ಯರಿಗೆ ಅರ್ಥವಾಗುತ್ತಿಲ್ಲ. ಅದು ಆ ತಂತ್ರಜ್ಞರಿಗೆ ಮಾತ್ರ ಅರ್ಥವಾಗುತ್ತದೆ. ಪಾಪಕ್ಕೆ ಸಂಬಂಧಿಸಿದ ಚಿಹ್ನೆ ಮೂಡುತ್ತದೆ. ಜೀವನ ಯಾತ್ರೆಯನ್ನು ಮುಗಿಸಿ ಚಿತ್ರಗುಪ್ತನ ಮುಂದೆ ನಿಂತಾಗ ಆ ಚಿಹ್ನೆಯನ್ನು ನೋಡಿ ಫಲವನ್ನು ನಿರ್ಧರಿಸುತ್ತಾನೆ. ಅದಕ್ಕೂ ಮೊದಲೆ ಪ್ರಾಯಶ್ಚಿತ್ತದ ಮೂಲಕ ನಮ್ಮ ಪಾಪಗಳನ್ನು ತೊಳೆದುಕೊಳ್ಳಬಹುದು ಎಂದು ಎಚ್ಚರಿಸಿದರು.

ಚಾಕುವಿನಿಂದ ಕೊಲೆಗಾರನು ಜೀವವನ್ನು ತೆಗೆದರೆ, ವೈದ್ಯರು ಶಸಚಿಕಿತ್ಸೆ ಮೂಲಕ ದೇಹಕ್ಕೆ ಪುನರ್ಜನ್ಮ ನೀಡುತ್ತಾರೆ. ಇಬ್ಬರೂ ಕೂಡ ಚಾಕುವನ್ನೇ ಬಳಸಿ ದೇಹವನ್ನು ತುಂಡರಿಸಿದ್ದರೂ, ಇಬ್ಬರ ಉದ್ದೇಶಗಳು ಬೇರೆ ಬೇರೆ. ಕೊಲೆಗಾರನ ಕಾರ್ಯ ಪಾಪವಾದರೆ, ವೈದ್ಯನ ಕಾರ್ಯ ಪುಣ್ಯಮಯ. ಧರ್ಮಶಾಸ ಸೂಚಿಸುವ ಪ್ರಾಯಶ್ಚಿತ್ತ ವಾರ್ಗಗಳು ನಮಗೆ ತಿಳಿಯದೆ ಇದ್ದರೆ, ತುಂಬು ಮನಸ್ಸಿನಿಂದ ಜಗಜ್ಜನನಿಯನ್ನು ಭಾವಿಸಿದರೂ ಸಾಕು ಎಂದು ತಿಳಿಸಿದರು.

ಶ್ರೀಲಕ್ಷ್ಮಿ ಮಂತ್ರ ಹವನ, ದುರ್ಗಾಸಪ್ತಶತಿ ಪಾರಾಯಣ, ರಾಜರಾಜೇಶ್ವರೀ ಪೂಜೆ ಕಾರ್ಯಕ್ರಮ ನಡೆಯಿತು.

ಸಿಎ ರವೀಂದ್ರ ಭಟ್ ಟಿ.ಎಲ್, ಸಿಎ ಗಣಪತಿ ಶೆಟ್ಟಿಸರ, ಮಂಜುನಾಥ ಹೆಗಡೆ ದಂಪತಿ ಸೇರಿ ಭಕ್ತರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net