ಒಂಟಿ ಮಹಿಳೆಯರ ಸಮಾವೇಶ ಜು. 19ರಂದು

Published on

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣ ಸಂಘವು ಸಾಮಾಜಿಕ ಬಹಿಷ್ಕಾರ ತೊಡೆಯೋಣ, ಸ್ವಾವಲಂಬಿ ಬದುಕಿಗೆ ಮುನ್ನಡೆಯೋಣ ಎಂಬ ಘೊಷಣೆಯಡಿ ಹುಬ್ಬಳ್ಳಿ ಜೆ.ಸಿ. ನಗರದ ಅಕ್ಕನ ಬಳಗದಲ್ಲಿ ಜು. 19ರಂದು ಬೆಳಗ್ಗೆ 11 ಗಂಟೆಗೆ ಧಾರವಾಡ ಜಿಲ್ಲಾ ಒಂಟಿ ಮಹಿಳೆಯರ ಸಮಾವೇಶ ಆಯೋಜಿಸಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ, ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಯು. ಬಸವರಾಜ, ಕರ್ನಾಟಕ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣ ಸಂಘದ ಸಂಚಾಲಕಿ ಬಿ. ಮಾಳಮ್ಮ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಅಖಿಲ ಭಾರತ ವಕೀಲರ ಒಕ್ಕೂಟದ ಮಹಿಳಾ ವಕೀಲರ ಉಪ ಸಮಿತಿ ಸಂಚಾಲಕಿ ಸವಿತಾ ಪಾಟೀಲ, ಸಿಐಟಿಯು ಜಿಲ್ಲಾ ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಸಂಚಾಲಕಿ ಚನ್ನಮ್ನ ಡೊಳ್ಳಿನ, ಇತರರು ಭಾಗವಹಿಸುವರು. ಸಂಘದ ಜಿಲ್ಲಾ ಸಂಚಾಲಕಿ ಸುಜಾತಾ ಬೇಸ್ತರ ಅಧ್ಯಕ್ಷತೆ ವಹಿಸಲಿದ್ದಾರೆ.

ಪತಿಯನ್ನು ತೊರೆದಿರುವ, ವಿಧವೆಯಾಗಿರುವ, ಮದುವೆಯಾಗದ ಹೀಗೆ ಹಲವು ಕಾರಣಗಳಿಂದ ಒಂಟಿ ಜೀವನ ನಡೆಸುತ್ತಿರುವ ಮಹಿಳೆಯರ ಬದುಕಿನ ಸಮಸ್ಯೆ, ಸಂಕಷ್ಟಗಳ ಕುರಿತು ರ್ಚಚಿಸಿ ಮುಂದಿನ ದಿನಗಳಲ್ಲಿ ಜಾಗೃತಿ, ಬೇಡಿಕೆಗಳಿಗಾಗಿ ಹೋರಾಟ ಕಾರ್ಯಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಈ ಸಮಾವೇಶದಲ್ಲಿ ಒಂಟಿ ಮಹಿಳೆಯರು ಭಾಗವಹಿಸಬೇಕೆಂದು ಸಂಘದ ಸಂಚಾಲಕ ಮಹೇಶ ಪತ್ತಾರ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net