ಒಂದೇ ಮಳೆಗೆ ಕೆಸರು ಗದ್ದೆಯಂತಾದ ಸಿದ್ದಾಪುರ ಸರ್ಕಾರಿ ಶಾಲಾ ಆವರಣ

280722 Siddapura Govt School Ground Rain Effect
ಸಿದ್ದಾಪುರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಅಪಾರ ಪ್ರಮಾಣದ ಮಳೆ ನೀರು ಸಂಗ್ರಹವಾಗಿರುವುದು.
Published on

ಸಿದ್ದಾಪುರ: ಇಲ್ಲಿನ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಮಳೆ ನೀರು ಸಂಗ್ರಹಗೊಂಡು ಕೆಸರು ಗದ್ದೆಯಂತಾಗಿದೆ. ಗುರುವಾರ ಬೆಳಗ್ಗೆ ಸುರಿದ ಭಾರಿ ಮಳೆಗೆ ಶಾಲಾ ಆವರಣ ಕೆಸರುಮಯವಾಗಿದೆ. ಪ್ರತಿ ಬಾರಿ ಮಳೆಯಾದಾಗಲೂ ಇದೇ ಸ್ಥಿತಿ. ಗ್ರಾಮಸ್ಥರು ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಪಾರ ಪ್ರಮಾಣದ ಮಳೆ ನೀರು ನಿಂತಿರುವುದರಿಂದ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಸಮಸ್ಯೆಯಾಗಿದೆ. ಮಳೆಗಾಲವಿರುವುದರಿಂದ ಶೀಘ್ರವೇ ನೀರನ್ನು ಹೊರ ಹರಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳು, ಶಿಕ್ಷಕರಿಗೆ ಸಮಸ್ಯೆಯಾಗಲಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರತಿ ಬಾರಿ ಮಳೆಯಾದಾಗಳೂ ಶಾಲಾ ಆವರಣದಲ್ಲಿ ನೀರು ನಿಲ್ಲುತ್ತದೆ. ಇದರಿಂದಾಗಿ ಮಕ್ಕಳಿಗೆ ಹೆಚ್ಚಿನ ಸಮಸ್ಯೆಯಾಗುತ್ತದೆ. ಗ್ರಾಪಂ ಪಿಡಿಒಗೆ ಹಲವು ಸಲ ಮನವಿ ಮಾಡಿದ್ದೇವೆ. ಆದರೆ, ಸ್ಪಂದಿಸುತ್ತಿಲ್ಲ.| ಕಾಸಿಂ ಸಾಹೇಬ್ಮುಖ್ಯಶಿಕ್ಷಕ, ಸಿದ್ದಾಪುರದ ಸರ್ಕಾರಿ ಪ್ರೌಢಶಾಲೆಶಾಲೆ ಮೈದಾನ ಸಮತಟ್ಟು ಮಾಡಲು 20-25 ಲಕ್ಷ ರೂ. ಅನುದಾನ ಬೇಕು. ಅಷ್ಟು ಹಣ ವ್ಯಯಿಸಿ ಗ್ರಾಪಂನಿಂದ ಅಭಿವೃದ್ಧಿ ಮಾಡಲು ಅವಕಾಶವಿಲ್ಲ.ಶಾಲಾ ಆವರಣದಲ್ಲಿ ಸಂಗ್ರಹಗೊಳ್ಳುವ ನೀರನ್ನು ಬೇರೆಡೆ ಹರಿಸಲು ಚರಂಡಿ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಿ ಕಳುಹಿಸಲಾಗಿದೆ. ಶಾಲಾ ಮುಖ್ಯಶಿಕ್ಷಕರು ಮೊದಲು ಸರ್ಕಾರಿ ಆಸ್ತಿಗಳನ್ನು ರಕ್ಷಿಸಿಕೊಳ್ಳಲು ಗಮನಹರಿಸಬೇಕು.| ಸಾಯಿನಾಥ, ಸಿದ್ದಾಪುರ ಗ್ರಾಪಂ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net