ಏಕಪಕ್ಷೀಯ ನಿರ್ಧಾರ ಸರಿಯಲ್ಲ

19 KAMPLI 01
ಕಂಪ್ಲಿಯಲ್ಲಿ ಆಯೋಜಿಸಿದ್ದ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತ ಸಣಾಪುರದ ಮರಿಸ್ವಾಮಿ ಮಾತನಾಡಿದರು. ಪ್ರಮುಖರಾದ ಎಚ್.ಶ್ರೀನಿವಾಸ್, ಜಿ.ಯಲ್ಲಪ್ಪ, ಶೇಖರ್, ಎನ್.ಗಂಗಣ್ಣ ಇತರರಿದ್ದರು.
Published on

ಕಂಪ್ಲಿ: ಪಟ್ಟಣದ ಅತಿಥಿಗೃಹ ಆವರಣದಲ್ಲಿ ತಾಲೂಕಿನ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಕಾರ್ಯಕರ್ತರು ಸೋಮವಾರ ಸಭೆ ನಡೆಸಿದರು.

ಕಾರ್ಯಕರ್ತ ಎಚ್.ಶ್ರೀನಿವಾಸ್ ಮಾತನಾಡಿ, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ, ಜಿಲ್ಲಾ ಸಮಿತಿ ಕೂಲಂಕಷವಾಗಿ ಪರಿಶೀಲಿಸದೆ ಭಾನುವಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಪಟ್ಟಣದ ಕಾರ್ಯಕರ್ತರನ್ನು ಕಡೆಗಣಿಸಿ, ಗ್ರಾಮೀಣ ಭಾಗದವರನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಿದ್ದು ಸರಿಯಲ್ಲ.

ಸಮಿತಿ ವಿಭಾಗೀಯ ಸಂಚಾಲಕ ಮುಂಡ್ರಿಗಿ ನಾಗರಾಜ ಅವರು ಕೂಡಲೇ ಮಧ್ಯಪ್ರವೇಶಿಸಿ ಎಚ್.ಶ್ರೀನಿವಾಸ ಅವರನ್ನು ತಾಲೂಕು ಸಂಚಾಲಕರನ್ನಾಗಿ ಆಯ್ಕೆ ಮಾಡುವಂತೆ ಒತ್ತಾಯಿಸಿದರು. ಸಣಾಪುರದ ಮರಿಸ್ವಾಮಿ ಮಾತನಾಡಿ, ಈಗ ಆಯ್ಕೆ ಮಾಡಿರುವ ಸಂಚಾಲಕರು ಈಗಾಗಲೇ ನಾನಾ ಸ್ಥಾನಗಳ ಅಧಿಕಾರ ಅನುಭವಿಸಿದ್ದಾರೆ. ಹೊಸಬರಿಗೆ ಅವಕಾಶ ಕಲ್ಪಿಸಬೇಕು. ತಾಲೂಕಿನ ಸಂಚಾಲಕ ಸ್ಥಾನವನ್ನು ಕಂಪ್ಲಿಯ ಯುವಕ ಎಚ್.ಶ್ರೀನಿವಾಸ್‌ಗೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಜಿ.ಯಲ್ಲಪ್ಪ, ಶೇಖರ್, ಎನ್.ಗಂಗಣ್ಣ, ಹನುಮಂತ, ಮುದ್ದಾಪುರ ಯಲ್ಲಪ್ಪ, ಮಾರೇಶ, ಗೋಪಿನಾಥ, ದುರ್ಗೇಶ್, ಪಿ.ಶಂಭುಲಿಂಗ, ಎಂ.ಡಿ.ಕ್ಯಾಂಪ್ ಬಾಬು, ಹುಲುಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net