ಒಂಟಿ ಕೈ ರೌಡಿಯ ಬಂಧನ; ಒಂದೇ ಕೈಯಲ್ಲಿ ಮಾಡಿದ್ದ ಕೊಲೆ, ಕೊಲೆಯತ್ನ, ಸುಲಿಗೆ..

Onit Kai Venkatesh
Published on

ಬೆಂಗಳೂರು: ಒಂದೇ ಕೈಯಲ್ಲಿ ಹಲವು ಅಪರಾಧಗಳನ್ನು ಮಾಡಿರುವ ರೌಡಿಶೀಟರ್​ನನ್ನು ಗೂಂಡಾ ಕಾಯ್ದೆ ಅನ್ವಯ ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಸಿದ್ದಾಪುರದ ರೌಡಿಶೀಟರ್ ವೆಂಕಟೇಶ್ ಅಲಿಯಾಸ್​ ಒಂಟಿ ಕೈ ವೆಂಕಟೇಶ್ ಬಂಧಿತ ಆರೋಪಿ.

ಒಂದೇ ಕೈಯ ಈ ರೌಡಿ ಕೊಲೆ, ಕೊಲೆಯತ್ನ, ಸುಲಿಗೆ ಸೇರಿ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದು, ಸಿದ್ದಾಪುರ ಠಾಣೆಯೊಂದರಲ್ಲೇ ಈತನ ವಿರುದ್ಧ 10 ಪ್ರಕರಣಗಳಿವೆ. ಕುಖ್ಯಾತ ರೌಡಿಗಳಾದ ಅಪ್ಪು ಮಂಜುನಾಥ್ ಅಲಿಯಾಸ್​ ದೊಣ್ಣೆ ಮಂಜ, ಶಂಕರ ಇನ್ನಿತರ ರೌಡಿಗಳ ಜತೆ ಸೇರಿ ಈತ ಅಪರಾಧ ಕೃತ್ಯಗಳನ್ನು ಎಸಗಿದ್ದ.

ಹೀಗೆ ಹಲವು ಅಪರಾಧಗಳಲ್ಲ ಆರೋಪಿಯಾಗಿದ್ದರೂ, ಹಲವು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಈತ ಪೊಲೀಸರ ಕಣ್ಣು ತಪ್ಪಿಸಿಕೊಂಡು ಓಡಾಡುತ್ತಿದ್ದ. ಕೊನೆಗೂ ಈತನನ್ನು ಬಂಧಿಸಿರುವ ಪೊಲೀಸರು ಗೂಂಡಾ ಕಾಯ್ದೆ ಅಡಿ ಕೇಸ್ ಜಡಿದು ಜೈಲಿಗಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net