ಸಂಶೋಧನಾ ವಿದ್ಯಾರ್ಥಿಗಳಿಂದ ಹಾಡಿ ಸರ್ವೆ

WhatsApp Image 2025-09-06 at 6.56.50 PM
Published on

ಮೈಸೂರು: ಪರಿಶಿಷ್ಟ ಪಂಗಡಗಳ ಸಂಶೋಧನಾ ವಿದ್ಯಾರ್ಥಿಗಳು ಎಚ್.ಡಿ. ಕೋಟೆ ತಾಲೂಕು ಬಸವನಗಿರಿ ಹಾಡಿಯಲ್ಲಿ ಮನೆ, ಮನೆಗೆ ತೆರಳಿ ಸರ್ವೆ ನಡೆಸಿ ಮಾಹಿತಿ ಸಂಗ್ರಹಿಸಿದರು.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ 10 ದಿನಗಳ ಕಾಲ ಸಂಶೋಧನಾ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಸಂಶೋಧನಾ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.

ವಿದ್ಯಾರ್ಥಿಗಳು ಶುಕ್ರವಾರ ಬಸವನಗಿರಿ ಹಾಡಿಗೆ ಭೇಟಿ ನೀಡಿ ಮನೆ ಇದೆಯೇ? ರಸ್ತೆ, ಕುಡಿಯುವ ನೀರು, ಆಧಾರ್‌ಕಾರ್ಡ್ ಪಡಿತರ ಚೀಟಿ ಇದೆಯೇ? ಜಮೀನು, ದನಕರುಗಳು, ಟಿ.ವಿ. ಬೈಕ್, ವಿದ್ಯಾವಂತರೆಷ್ಟು ಮಂದಿ ಇದ್ದಾರೆ? ಏನು ಕೆಲಸ ಮಾಡುತ್ತಿದ್ದಾರೆ ಎಂಬ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ರಾಜಕೀಯವಾಗಿ ಅವರ ಜೀವನ ನಿರ್ವಹಣೆ ಹೇಗಿದೆ ಎಂಬ ಸಮಗ್ರ ಮಾಹಿತಿಯ ದತ್ತಾಂಶ ಸಂಗ್ರಹಿಸಿದರು.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪ ನಿರ್ದೇಶಕಿ ಬಿ.ಎಸ್. ಪ್ರಭಾಅರಸ್ ಮಾತನಾಡಿ, ಈ ಸರ್ವೆಯಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ. ಸಂಗ್ರಹಿಸಿರುವ ದತ್ತಾಂಶವನ್ನು ಇಲಾಖೆಗೆ ಕಳಿಸಲಾಗುವುದು. ಇದು ಪುನರ್‌ವಸತಿ ಹಾಡಿಯಾಗಿದ್ದು, ಪುನರ್ ವಸತಿಯಾಗಿಲ್ಲದ ಡಿ.ಬಿ. ಕುಪ್ಪೆ ಹಾಡಿ ವ್ಯಾಪ್ತಿಯಲ್ಲಿ ಸರ್ವೆ ಮಾಡಲಾಗುವುದು ಎಂದರು.

ಸಂಸ್ಥೆಯ ಲೆಕ್ಕಾಧಿಕಾರಿ ಬಿ.ಎಸ್. ಭವ್ಯಾ, ಸಂಶೋಧಕರಾದ ಡಾ. ಮೋಹನ್‌ಕುಮಾರ್, ಡಾ. ಮಂಜುನಾಥ್, ಡಾ. ಎಸ್. ರವಿಕುಮಾರ್, ಡಾ. ಲೀಲಾವತಿ, ಡಾ. ರತ್ನಮ್ಮ, ಡಾ. ಮಧು ಗುಂಡ್ಲುಪೇಟೆ, ಗಂಗಾಧರ್, ಕೆ. ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net