ಸಿಂಗಿಂಗ್ ಸ್ಟಾರ್ಸ್ ಯುವ ಪ್ರತಿಭೆಗಳಿಗೆ ಸನ್ಮಾನ

mangalore
ಲಯನ್ಸ್ ಕ್ಲಬ್ ವತಿಯಿಂದ ಜಿಲ್ಲಾಮಟ್ಟದ ಲಯನ್ಸ್ ಸಿಂಗಿಂಗ್ ಸ್ಟಾರ್ಸ್ ಕಾರ್ಯಕ್ರಮದ ಸಂದರ್ಭ ಅಪೇಕ್ಷಾ ಪೈ ಹಾಗೂ ತನುಶ್ರೀ ಅವರನ್ನು ಸನ್ಮಾನಿಸಲಾಯಿತು. ಲಯನ್ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿಸೋಜ ದಂಪತಿ, ಕಾರ್ಯಕ್ರಮದ ಮುಖ್ಯ ಸಂಯೋಜಕ ಸೈಮನ್ ಲೋಬೊ ಮೊದಲಾದವರಿದ್ದರು.
Published on

ಮಂಗಳೂರು: ಲಯನ್ಸ್ ಕ್ಲಬ್ ವತಿಯಿಂದ ಜಿಲ್ಲಾಮಟ್ಟದ ಲಯನ್ಸ್ ಸಿಂಗಿಂಗ್ ಸ್ಟಾರ್ಸ್ ಕಾರ್ಯಕ್ರಮ ಲಯನ್ ಸೇವಾ ಮಂದಿರದಲ್ಲಿ ಇತ್ತೀಚೆಗೆ ಜರುಗಿತು.

130 ಸದಸ್ಯರು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ತೋರಿಸಿದರು. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಪ್ರತಿಭೆ ಅಪೇಕ್ಷಾ ಪೈ ಹಾಗೂ ತನುಶ್ರೀ ಅವರನ್ನು ಸನ್ಮಾನಿಸಲಾಯಿತು. ಲಯನ್ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿಸೋಜ ದಂಪತಿ, ಕಾರ್ಯಕ್ರಮದ ಮುಖ್ಯ ಸಂಯೋಜಕ ಸೈಮನ್ ಲೋಬೊ, ಜಿಲ್ಲಾ ಲಿಯೋ ಅಧ್ಯಕ್ಷೆ ಡಾ.ರಂಜಿತಾ ಶೆಟ್ಟಿ, ಮುಖ್ಯ ಸಲಹೆಗಾರರಾಗಿ 2 ವೈಸ್ ಜಿಲ್ಲಾ ಗವರ್ನರ್ ಅರವಿಂದ್ ಶೆಣೈ ಉಪಸ್ಥಿತರಿದ್ದರು. ಪ್ರಾಂತೀಯ ಮಟ್ಟದ ಅಂತಾಕ್ಷರಿ ಸ್ಪರ್ಧೆಯನ್ನು ಕುಂಬ್ಳೆ ನರಸಿಂಹ ಪ್ರಭು ಸಂಯೋಜಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net