ಅಣ್ಣಾವ್ರ ವಿಶೇಷ ಪ್ರೇಮಗೀತೆಗಳ ಗಾಯನ

Rajkumar 1
Published on

ಉದಯಗಿರಿಯ ಡಾ.ರಾಜ್‌ಕುಮಾರ್ ಮ್ಯೂಸಿಕಲ್ ಗ್ರೂಪ್ ವಾರ್ಷಿಕೋತ್ಸವದ ಅಂಗವಾಗಿ ಜು.21 ರಂದು ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಅಣ್ಣಾವ್ರ ವಿಶೇಷ ಪ್ರೇಮಗೀತೆಗಳು ಎಂಬ ಚಲನಚಿತ್ರಗಳ ಹಾಡುಗಳ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಂಡದ ಸುಧೀಂದ್ರ ತಿಳಿಸಿದರು.

ಬಿ.ಎಸ್.ಜಯರಾಮರಾಜು ನೇತೃತ್ವದಲ್ಲಿ ಅಂದು ಸಂಜೆ 5.30ಕ್ಕೆ ಕಾರ್ಯಕ್ರಮ ಆರಂಭವಾಗಿ ರಾತ್ರಿ 9.30ರವರೆಗೆ ನಡೆಯಲಿದೆ. ಡಾ. ರಾಜ್‌ಕುಮಾರ್ ಅವರ ಗಾಯನ ಹಾಗೂ ಅಭಿನಯದಲ್ಲಿ ಬಂದ 40 ಗೀತೆಗಳನ್ನು ಈ ವೇಳೆ ಹಾಡಲಾಗುವುದು. ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ತಂಡದ ಜನಾರ್ದನ್, ಸುರೇಶ್, ರಮೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net