ಮೈಸೂರಿನಲ್ಲಿ ಡಿ.30 ರಂದು ರಾಜ್‌ಕುಮಾರ್ ಗೀತ ಗಾಯನ

Dr. Rajkumar
Published on

ಮೈಸೂರು: ಸ್ಟಾೃನ್ಲಿ ಪಾರ್ಕರ್ ಸಂಗೀತ ಶಾಲೆ ವತಿಯಿಂದ ಡಿ.30 ರಂದು ಸಂಜೆ 4ಕ್ಕೆ ಕುವೆಂಪುನಗರದ ಗಾನಭಾರತೀ ವೀಣೆಶೇಷಣ್ಣ ಭವನದಲ್ಲಿ ಡಾ. ರಾಜ್‌ಕುಮಾರ್ ಹಾಡಿರುವ ಚಲನಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಸಂಸ್ಥಾಪಕ ಸ್ಟಾೃನ್ಲಿ ಪಾರ್ಕರ್ ಹೇಳಿದರು.

ಸಾರ್ವಜನಿಕರಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದ್ದು, ವೇದಿಕೆ ಕಾರ್ಯಕ್ರಮ ಇರುವುದಿಲ್ಲ. ಒಟ್ಟು 22 ಗಾಯಕ, ಗಾಯಕರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net