

ಮೈಸೂರು: ರಂಗರತ್ನಾಕರ ಸಂಸ್ಥೆ ವತಿಯಿಂದ ನ.24ರ ಸಂಜೆ 4 ಗಂಟೆಗೆ ರಾಮಕೃಷ್ಣ ನಗರದ ರಮಾಗೋವಿಂದ ರಂಗಮಂದಿರದಲ್ಲಿ ರಂಗ ದಿಗ್ಗಜರಿಗೆ ಅಭಿನಂದನೆ, ಪುಸ್ತಕ, ಧ್ವನಿಸುರುಳಿ ಬಿಡುಗಡೆ ಮತ್ತು ರಂಗಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.
ಹಿರಿಯ ಸಾಹಿತಿ ಹುರಗಲವಾಡಿ ಲಕ್ಷ್ಮೀನರಸಿಂಹಶಾಸ್ತ್ರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇಳೈ ಆಳ್ವಾರ್ ಸ್ವಾಮಿ, ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಗೋವಿಂದೇಗೌಡ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ವೇಳೆ ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿರುವ ಎಂ.ಎಸ್.ವೆಂಕಟರಾಂ ಕುಪ್ಯ, ಇಂದಿರಮ್ಮ, ಡಿ.ರಾಮು, ಪ್ರೊ.ಎ.ವಿ.ಸೂರ್ಯನಾರಾಯಣಸ್ವಾಮಿ, ಕಿರಗಸೂರು ರಾಜಪ್ಪ, ಚೌಡಪ್ಪದಾಸ್ ಇನ್ನಿತರರನ್ನು ಅಭಿನಂದಿಸಲಾಗುವುದು. ಕೆಲವರಿಗೆ ರಂಗಗೌರವ ನಡೆಯಲಿದೆ ಎಂದು ಹೇಳಿದರು.
ಸಂಸ್ಥೆ ಪದಾಧಿಕಾರಿಗಳಾದ ಕೆಂಪೇಗೌಡ, ವೆಂಕಟರಾಂ ಹಾಜರಿದ್ದರು.