

ಹೊರ್ತಿ : ಭಾರತ ದೇಶದಲ್ಲಿ ಹಿಂದು ಧರ್ಮ, ಸಂಸ್ಕೃತಿಯು ಮಠ-ಮಂದಿರಗಳಿಂದ ಉಳಿದಿದೆ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಾಪಸೆ ಹೇಳಿದರು.
ಸಮೀಪದ ಝಳಕಿಯಲ್ಲಿ ನಡೆದ ಶ್ರೀ ಗೌರಮ್ಮತಾಯಿ ಜಾತ್ರೆ ನಿಮಿತ್ತ ಶ್ರೀ ರೇಣುಕಾದೇವಿ ಚೌಡಕಿ ಪದಗಳ ಗಾಯನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ಸಣ್ಣಪ್ಪ ತಳವಾರ ಮಾತನಾಡಿದರು. ಶ್ರೀಶೈಲ ಹಿರೇಮಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪಾಂಡುರಂಗ ಝಳಕಿಕರ, ಶಿವಶಂಕರ ಕಾಟಕರ, ಪವನ ಪಾಟೀಲ, ಹಣಮಂತ ಕೋಳಿ, ರಮೇಶಗೌಡ ಬಗಲಿ, ರಮೇಶಗೌಡ ಪಾಟೀಲ, ಬಾಬುರಾಯಗೌಡ ಪಾಟೀಲ, ಶಂಕರಗೌಡ ಬಿರಾದಾರ, ನಿಂಬಣ್ಣ ತಳವಾರ, ರವಿ ತೇಲಿ, ಶಶಿಧರ ಪಾಟೀಲ, ಪೀರಪ್ಪ ಕಂಬಾರ, ರಶೀದ್ ಮುಲ್ಲಾ, ಅಂಬಣ್ಣ ಮಾವಿನಳ್ಳಿ, ಯಲ್ಲಪ್ಪ ಪೂಜಾರಿ, ತುಕಾರಾಮ ನಂದರಗಿ, ತುಕಾರಾಮ ಕಾಗರ, ಹುಸೇನಿಬಾಷಾ ಪಾಚಂಗೆ, ಕಲ್ಲಪ್ಪ ನಂದರಗಿ, ಯಲ್ಲಪ್ಪ ಪೂಜಾರಿ,ರಾಹುಲ ಹಿರೇಮಠ, ಮಲ್ಲಿಕಾರ್ಜುನ ಹೂಗಾರ ಪಾಲ್ಗೊಂಡಿದ್ದರು.