5ರಂದು ಮಧುರ ಗೀತೆಗಳ ಗಾಯನ

Music Instruments
Published on

ಮೈಸೂರು: ಸ್ನೇಹ ಸಂಗಮ ಹಾಡುಗಳ ಸಂಭ್ರಮ ತಂಡದಿಂದ ಮಧುರ ಗೀತೆಗಳ ಗಾಯನ ಕಾರ್ಯಕ್ರಮವನ್ನು ಮೇ 5ರಂದು ಸಂಜೆ 4ಕ್ಕೆ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಲಾಗಿದೆ.


ಕೂರ್ಗಳ್ಳಿ ಗ್ರಾಮದ ಮುಖಂಡ ಆರ್.ರಾಮು ಕಾರ್ಯಕ್ರಮ ಉದ್ಘಾಟಿಸುವರು. ಗಾಯಕಿ ಅಮೂಲ್ಯಾ ಭಾಗವಹಿಸುವರು.

ನಿತ್ಯಾನಂದಶೆಟ್ಟಿ, ಅಣ್ಣಯ್ಯ, ಪ್ರಕಾಶ್, ಪೀಟರ್, ಸತೀಶ್‌ರಾಜು, ಶೇಖರ್, ಚಂದ್ರಶೇಖರ್, ನೀತು ಉಮೇಶ್, ಪಲ್ಲವಿ ಪೈ, ಮೋನಿಷ್ ಸೇರಿದಂತೆ 11 ಗಾಯಕರು ಕನ್ನಡ ಮತ್ತು ಹಿಂದಿ ಚಲನಚಿತ್ರಗಳ 40ರಿಂದ 45 ಗೀತೆಗಳನ್ನು ಹಾಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಂಡದ ಸದಸ್ಯ ಲಿಂಗರಾಜು ತಿಳಿಸಿದರು. ಗಾಯಕರಾದ ಕೆ.ಐ.ಪ್ರಕಾಶ್, ಸತೀಶ್ ರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net