

ರಾಗಮಾಲಿಕಾ ಸ್ನೇಹ ಬಳಗದಿಂದ ಜು.14ರಂದು ಸಂಜೆ 5 ಗಂಟೆಗೆ ನಗರದ ನಾದಬ್ರಹ್ಮ ಸಭಾ ಮಂಟಪದಲ್ಲಿ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.
ಹೊಸ ಪ್ರತಿಭೆಗಳನ್ನು ಅನಾವರಣಗೊಳಿಸಲು ಬಳಗ ಸ್ಥಾಪಿಸಲಾಗಿದೆ. ಕಾರ್ಯಕ್ರಮದಲ್ಲಿ 10 ಕಲಾವಿದರು ಭಾಗವಹಿಸಿ ಪ್ರೇಕ್ಷಕರನ್ನು ರಂಜಿಸಲಿದ್ದು, ಕನ್ನಡ ಚಲನಚಿತ್ರಗಳ ಹಳೆ ಗೀತೆಗಳನ್ನು ಹಾಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಬಳಗದ ಅಧ್ಯಕ್ಷ ಆರ್.ಕೃಷ್ಣಮೂರ್ತಿ ಮನವಿ ಮಾಡಿದರು.
ಬಳಗದ ಸದಸ್ಯರಾದ ಎಂ.ಸುರೇಶ್, ರಾಜಶೇಖರ ಎಂ.ಜವಳಗಿ, ಮೋಹನ್ ಕುಮಾರ್ ಇದ್ದರು.