ಚಲನಚಿತ್ರ ಗೀತೆಗಳ ಗಾಯನ

set-of-musical-instruments-in-doodle-style-violin-guitar-synthesizer-drum-electric-guitar-and-saxophone-vector
Published on

ಮೈಸೂರು:ಸ್ವರ ಸಂಗಮ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಜೂ.9 ರಂದು ಮಧ್ಯಾಹ್ನ 2 ಗಂಟೆಗೆ ನಗರದ ಪುರಭವನದಲ್ಲಿ ಹವ್ಯಾಸಿ ಗಾಯಕರಿಂದ ‘ತಾಳ ಹಾಕಿ ನಮ್ಮ ಜೋಡಿ ಹಾಡಿ’ ಎಂಬ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಂ. ಪುಟ್ಟಸ್ವಾಮಿ ತಿಳಿಸಿದರು.

ಉಚಿತ ಪ್ರವೇಶದ ಕಾರ್ಯಕ್ರಮವಾಗಿದ್ದು, 30 ಹವ್ಯಾಸಿ ಗಾಯಕರು ಕನ್ನಡ ಹಾಗೂ ಹಿಂದಿ ಚಿತ್ರಗೀತೆಗಳನ್ನು ಹಾಡಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಮುಖಂಡರಾದ ನಾಗರಾಜ್ ವಿ. ಬೈರಿ, ಅಜ್ಜು, ಅಕ್ಮಲ್, ಡಾ. ರೇಖಾ ಅರುಣ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net