ನವೋದ ಶಾಲೆಯಲ್ಲಿ ಅಸ್ಸಾಮಿ ಸೂಫಿ ಗೀತ ಗಾಯನ

25bhr 1 (1)
Published on

ಬಾಳೆಹೊನ್ನೂರು: ಸಮೀಪದ ಸೀಗೋಡು ಪಿಎಂ ಶ್ರೀಜವಾಹರ ಲಾಲ್ ನೆಹರು ನವೋದಯ ವಿದ್ಯಾಲಯದಲ್ಲಿ ಸ್ಪಿಕ್ ಮೆಕೆ ತಂಡದಿಂದ ಅಸ್ಸಾಮಿ ಸೂಫಿ ಗೀತ ಗಾಯನ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ಅಸ್ಸಾಮಿನ ಕಲಾವಿದರಾದ ಬಾಬುಲ್ ಆಲಿ ಮತ್ತು ತಂಡದವರು ಸೂಫಿ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಗೀತ ಗಾಯನದಲ್ಲಿ ಬಾಬುಲ್ ಆಲಿ, ಮೊಹಮ್ಮದ್, ಅಬ್ದುಲ್ ಮುಸ್ತಾಕ್, ಅಬ್ದುಲ್ ಸುಕೂರ್ ಗಾಯಕರಾಗಿ ಕಾರ್ಯಕ್ರಮ ನಿರ್ವಹಿಸಿದರು. ರೋಮೇಶ್ ದತ್ತಾ (ಹಾರ್ಮೋನಿಯಂ), ಹೇಮಂತಾ ಹಜಾರಿಕಾ (ಧೋತ್ತಾ), ಪ್ರದೀಪ್ ಬೊರುವಾ (ಡಾಗರ್), ಭಾಸ್ಕರ್ ಶರ್ಮಾ (ಕೊಳಲು), ನಯನ್ ಜ್ಯೋತಿ (ಏಕ್ ತಾರ ತಬಲ, ಗೊಗೊಯಿ ವಾದ್ಯ ಸಂಗೀತ) ನುಡಿಸಿದರು. ನವೋದಯ ವಿದ್ಯಾಲಯದ ಪ್ರಾಂಶುಪಾಲೆ ರೇಖಾ ಅಶೋಕ್, ಉಪನ್ಯಾಸಕರಾದ ಶ್ರೀರಾಜ್, ನಾಗರಾಜ್, ಯಾತ್ರಾ ಪಟೇಲ್, ಕೆ.ಸಿ.ಸಾತ್ವಿಕ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net