ಸಂಗೀತ ಗೋಷ್ಠಿಯಲ್ಲಿ ಗಾಯಕಿ ಸಂಗೀತಾ ಕಟ್ಟಿ ನಿನಾದ

mysore
Published on

ಮೈಸೂರು: ಯುವ ಕಲಾವಿದ ಹೊ.ನಂ.ಅಂಕರಾಜು ಅವರ ತಾಯಿಗೆ ಚಿಕಿತ್ಸೆಯ ಸಹಾಯಾರ್ಥವಾಗಿ ಭಾರತೀಯ ವಿದ್ಯಾರ್ಥಿ ಸಂಘ(ಬಿವಿಎಸ್) ಮತ್ತು ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟದ ಸಹಯೋಗದಲ್ಲಿ ಸಂಗೀತ ಗೋಷ್ಠಿ ಕಾರ್ಯಕ್ರಮವನ್ನು ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಭಾನುವಾರ ಸಂಜೆ ಏರ್ಪಡಿಸಲಾಗಿತ್ತು.


ನಟ ಪ್ರಕಾಶ್ ರೈ ಮಾತನಾಡಿ, ಮನುಷ್ಯ ಮತ್ತೊಬ್ಬ ಮನುಷ್ಯನ ಮೇಲೆ ನಂಬಿಕೆ ಉಳಿಸಿಕೊಳ್ಳುವುದೇ ದೊಡ್ಡ ಗುಣವಾಗಿದೆ. ಎಲ್ಲರೂ ಒಂದಾಗಿರುವುದು ಮುಖ್ಯ. ಇದು ಶ್ಲಾಘನೀಯ ಕಾರ್ಯಕ್ರಮ ಎಂದರು.


ಅಕ್ಕ ಐಎಎಸ್ ಅಕಾಡೆಮಿ ಮುಖ್ಯಸ್ಥ ಡಾ.ಶಿವಕುಮಾರ್ ಮಾತನಾಡಿ, ಅಂಕರಾಜು ಅವರು ರಂಗಭೂಮಿ ನಟ, ಅಭಿನಯ ನಿರ್ದೇಶನದೊಂದಿಗೆ ರಂಗ ತರಬೇತಿ ನೀಡುತ್ತಿದ್ದಾರೆ. ಅಂದಾಜು 50 ನಾಟಕಗಳಲ್ಲಿ ಅಭಿನಯಿಸಿ ನಿರ್ದೇಶನ ಮಾಡಿದ್ದಾರೆ. ಮೂಕಾಭಿನಯದಲ್ಲೂ ಗಮನ ಸೆಳೆದಿದ್ದಾರೆ. ಇವರ ತಾಯಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಅಪಾರ ಹಣದ ಅಗತ್ಯವಿದೆ. ನೆರವಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.


ಗಾಯಕಿ ಸಂಗೀತಾ ಕಟ್ಟಿ, ಚಿಂತಕ ಶಂಕರ್ ದೇವನೂರು, ಮೈವಿವಿ ಆಡಳಿತಾಧಿಕಾರಿ ಪ್ರೊ.ಎಸ್.ಟಿ.ರಾಮಚಂದ್ರ, ವೈದ್ಯ ಡಾ.ಸುಶ್ರುತ್ ಗೌಡ, ಮೈಸೂರು ವಕೀಲರ ಸಂಘದ ಕಾರ್ಯದರ್ಶಿ ಉಮೇಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net