ಅರಿವಿನಿಂದ ಜೀವನ ನಡೆಸಿ

26 CHN
Published on

ಚನ್ನಗಿರಿ: ಪ್ರತಿಭೆ ಮತ್ತು ರೂಪ ದೇವರ ಕೊಡುಗೆಯಾದರೆ, ಕೀರ್ತಿ ಮತ್ತು ಹಣ ಮನುಷ್ಯನ ಸೃಷ್ಟಿಯಾಗಿದೆ. ವ್ಯಕ್ತಿತ್ವ ಮತ್ತು ಅಹಂಕಾರ ತಾನೇ ರೂಪಿಸಿಕೊಂಡಿದ್ದಾಗಿದೆ. ಆದ್ದರಿಂದ ಅರಿವಿನಿಂದ ಜೀವನ ನಡೆಸಬೇಕು ಎಂದು ಗಾಯಕ ಮೆಹಬೂಬ್ ಸಾಬ್ ಹೇಳಿದರು.

ಚನ್ನಗಿರಿ ತಾಲೂಕು ತಣಿಗೆರೆ ಗ್ರಾಮದಲ್ಲಿ ಮಂಗಳವಾರ ನಿಸರ್ಗ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯ ನಿಸರ್ಗ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾರೇ ಆಗಲಿ ತಮ್ಮ ಕಷ್ಟಗಳನ್ನು ಭಗವಂತನ ಮುಂದೆ ಮಾತ್ರ ಹೇಳಿಕೊಂಡು ಅಳಬೇಕು, ಕಾರಣ ದೇವರು ಯಾರ ಬಳಿಯೂ ಹೇಳಿಕೊಂಡು ನಗುವುದಿಲ್ಲ, ಬದಲಾಗಿ ಕಷ್ಟ ಎದುರಿಸುವ ಶಕ್ತಿ ಕೊಡುತ್ತಾನೆ ಎಂಬ ನಂಬಿಕೆ ಬರಲಿದೆ ಹಾಗೂ ವಿಶ್ವಾಸದಿಂದ ಭವಿಷ್ಯ ರೂಪಿಸಿಕೊಳ್ಳಲು ದಾರಿ ಸಿಗುತ್ತದೆ ಎಂದು ತಿಳಿಸಿದರು.

ಚಿತ್ರದುರ್ಗ ಬಾಪೂಜಿ ಶಿಕ್ಷಣ ಸಂಸ್ಥೆಯ ಉಪ ಪ್ರಾಚಾರ್ಯ ಎಚ್.ಎನ್.ಶಿವಕುಮಾರ್ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಕರು,ಪಾಲಕರು ಸಂಸ್ಕೃತಿ ಮತ್ತು ಸಂಸ್ಕಾರ ಹೇಳುತ್ತ ಬೆಳೆಸಬೇಕು, ಸಾಮಾಜಿಕ ಕಾಳಜಿಯ ಮನಸ್ಥಿತಿ ಮತ್ತು ಸಂಬಂಧಗಳ ಬಾಂಧವ್ಯ ತಿಳಿಸಬೇಕು ಎಂದರು.

ತಣಿಗೆರೆ ಗ್ರಾಪಂ ಅಧ್ಯಕ್ಷ ಮಲ್ಲೇಶ್, ಮಾಜಿ ಅಧ್ಯಕ್ಷ ವಿಕ್ರಂ ಪಾಟೀಲ್, ಸಂಸ್ಥೆಯ ಅಧ್ಯಕ್ಷ ಆರ್.ಆರ್.ಜಗದೀಶ್, ಕಾರ್ಯದರ್ಶಿ ಜಿ.ಎಂ.ವಿರೂಪಾಕ್ಷಪ್ಪ, ಇಂಡಿಯನ್ ರೈಲ್ವೆ ಅಧಿಕಾರಿ ಕೃಷ್ಣಮೂರ್ತಿ, ನಿರ್ದೇಶಕ ಉಮೇಶ್, ಪತ್ರಕರ್ತ ಎಸ್.ಜೆ.ಕಿರಣ್ ಇದ್ದರು. ಮೆಹಬೂಬ್ ಸಾಬ್ ಅವರು ಭಾವಗೀತೆ ಮತ್ತು ಜಾನಪದ ಗೀತೆ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net