

ಸಿಂದಗಿ: ತಾಲೂಕಿನ ಬೋರಗಿ ಗ್ರಾಮದ ಜಾನಪದ, ತತ್ವಪದಗಾರ್ತಿ ಇಮಾಂಬಿ ದೊಡಮನಿ ಅವರಿಗೆ 2023ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿಯ ಗೌರವ ಪ್ರಶಸ್ತಿ ಲಭಿಸಿದೆ.
ಏಕತಾರಿಯಿಂದ ಭಜನೆ, ಜಾನಪದ ಹಾಗೂ ತತ್ವಪದಗಳನ್ನು ಹಾಡುತ್ತ ಬಂದಿರುವ ಇಮಾಂಬಿ ಅವರಿಗೆ ಜಾನಪದ ಕ್ಷೇತ್ರದ ಹಿರಿದಾದ ಗೌರವ ದೊರೆತಂತಾಗಿದೆ.
ಇಮಾಂಬಿ ಅವರಿಗೆ ದೊರೆತ ಅಕಾಡೆಮಿ ಗೌರವ ಪ್ರಶಸ್ತಿಗೆ ಸಿಂದಗಿ ಜಾನಪದ ಕ್ಷೇತ್ರ ಸಂಭ್ರಮಿಸಿದೆ.
ಈ ಗೌರವ ಪ್ರಶಸ್ತಿಯು 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಲಕವನ್ನು ಹೊಂದಿದೆ. ಕೊಪ್ಪಳದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಇಮಾಂಬಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.