ಗಾಯಕ ಬಸವಲಿಂಗಯ್ಯ ಅಮರ

10KITTUR1
Published on

ಚನ್ನಮ್ಮನ ಕಿತ್ತೂರು: ಬಸವಲಿಂಗಯ್ಯ ಹಿರೇಮಠ ಗಾನ ಗಾರುಡಿಗ ಮಾತ್ರವಲ್ಲ, ಕಂಚಿನ ಕಂಠದ ಗಾಯಕ ಎಂದು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಬೆಲೂರಿನ ಗಾನ ಗಾರುಡಿಗ ಬಸವಲಿಂಗಯ್ಯ ಹಿರೇಮಠ ಪ್ರತಿಷ್ಠಾನ ಗುರುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಹಾಗೂ ಸಂಗೀತ, ನತ್ಯ, ನಾಟಕ ಸಾಂಸತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಸವಲಿಂಗಯ್ಯ ನಾಡಿನಾದ್ಯಂತ ತತ್ತ್ವಪದ, ವಚನ ಸಂಗೀತ, ರಂಗಗೀತೆ, ಜನಪದ ಸೊಗಡಿನ ಮಾತು, ಹಾಡಿನ ಮೂಲಕ ಜೀವಂತವಾಗಿದ್ದಾರೆ. 30 ವರ್ಷಗಳ ಹಿಂದೆ ಸಾಣೇಹಳ್ಳಿಯಲ್ಲಿ ಬಸವಲಿಂಗಯ್ಯ ಮತ್ತು ವಿಶ್ವೇಶ್ವರಿ ಇಬ್ಬರಿಗೂ ಒಂದೇ ಶಾಲು ಹೊದಿಸಿ ರಂಗಜೋಡಿಗಳಾಗಿ ಇರಲು ಹರಸಿದ್ದು ನೆನಪಿದೆ. ಬಸವಲಿಂಗಯ್ಯ ಹೆಸರುಳಿಸುವ ಕಾರ್ಯಕ್ಕೆ ಯುವಪೀಳಿಗೆ ತಯಾರಾಗಬೇಕಿದೆ. ಅವರ ಕೊಡುಗೆ ಸ್ಮರಿಸಬೇಕು ಎಂದರು.

ತುಮಕೂರಿನ ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯ ಜೀವಂತವಾಗಿದ್ದು ಏನನ್ನೂ ಸಾಧಿಸದೆ ಸತ್ತವರಂತೆ ಬದುಕುವುದಕ್ಕಿಂತ ಸತ್ತರೂ ಜೀವಂತವಾಗಿರುವ ಕಾರ್ಯ ನಾವು ಮಾಡಬೇಕು. ಆಗ ಬದುಕಿಗೆ ಅರ್ಥವಿದೆ. ಅಂತಹ ಬದುಕು ಬಸಲಿಂಗಯ್ಯ ಹಿರೇಮಠ ಅವರದ್ದು ಎಂದು ಹೇಳಿದರು.

ಹಂಪಿ ವಿವಿ ನಿವೃತ್ತ ಕುಲಪತಿ ಡಾ.ಮಲ್ಲಿಕಾ ಂಟಿ ಮಾತನಾಡಿದರು. ಲಂಡನ್ನಿನ ಬಸವ ಇಂಟರ್​ ನ್ಯಾಷನಲ್​ ೌಂಡೇಷನ್​ ಅಧ್ಯ ಎಸ್​. ಮಹದೇವಯ್ಯ ಅವರು ಲಂಡನ್​ನಲ್ಲಿ ಬಸಲಿಂಗಯ್ಯ ತತ್ತ್ವಪದ ಹಾಗೂ ವಚನ ಸಂಗೀತ ನೀಡಿದ ಕಾರ್ಯಕ್ರಮಗಳನ್ನು ನೆನಪಿಸಿಕೊಂಡರು. ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಬೆಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗಾನ ಗಾರುಡಿಗ ಬಸಲಿಂಗಯ್ಯ ಹಿರೇಮಠ ರಾಜ್ಯ ಪ್ರಶಸ್ತಿಯನ್ನು ಪಾರಿಜಾತ ಕಲಾವಿದ ಮಲ್ಲಿಕಾರ್ಜುನ ಮುದಕವಿ ಅವರಿಗೆ ನೀಡಿ ಗೌರವಿಸಲಾಯಿತು. ವಿವಿಧ ಸಾಂಸತಿಕ ಕಾರ್ಯಕ್ರಮಗಳು ನಡೆದವು.

ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಎಂ.ಕೆ. ಹುಬ್ಬಳ್ಳಿ ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕ ವೀರೇಶ ಕಂಬಳಿ ಹಾಗೂ ಗುರು ಕಲ್ಮಠ ಪ್ರತಿಷ್ಠಾನ ಅಧ್ಯ ಎನ್​.ಎಸ್​. ಗಲಗಲಿ, ಮತ್ಯುಂಜಯ ಸ್ವಾಮಿ ಹಿರೇಮಠ, ಕಾರ್ಯದರ್ಶಿ ಸಂಗಮೇಶ ಹಿರೇಮಠ, ನಾಗಭೂಷಣ ಹಿರೇಮಠ, ಸದಸ್ಯ ನಾಗೇಶ ಬೆಣ್ಣಿ, ವಿವೇಕ ಕುರುಗುಂದ, ಬಸವರಾಜ ಲದ್ದಿಮಠ, ಡಾ.ಬಾಳಣ್ಣ ಸೀಗೆಹಳ್ಳಿ, ಗುರುಸಿದ್ದಯ್ಯ ಕಲ್ಮಠ, ಸಿದ್ದಯ್ಯಸ್ವಾಮಿ ದ್ಯಾವಲತ್ತಿ, ಆಶಾ ಸಯ್ಯದ, ಭಾರತಿ ಕಲ್ಮಠ, ಅನಿಲ ಮೆತ್ರಿ, ಸೋಹಿಲ ಕುಮಾರ, ವಿಜಯಕುಮಾರ ಹುದಲಿಮಠ. ಎಂ.ಆರ್​. ಕಲ್ಮಠ, ಶ್ರೀಕಾಂತ ದಳವಾಯಿ, ಕಲ್ಲಪ್ಪ ಕುರಗುಂದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net