

ಶ್ರೀ ಗುರು ಪುಟ್ಟರಾಜ ಸಂಗೀತ ಸಭಾ ವತಿಯಿಂದ ಪಂ.ಪುಟ್ಟರಾಜ ಕವಿ ಗವಾಯಿಗಳ 13ನೇ ಪುಣ್ಯ ಸ್ಮರಣೆ ಅಂಗವಾಗಿ ‘ಸಂಗೀತೋತ್ಸವ’ ಕಾರ್ಯಕ್ರಮನ್ನು ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಡಿ.3 ರಂದು ಆಯೋಜಿಸಲಾಗಿದೆ.
ಬೆಳಗ್ಗೆ 9 ಗಂಟೆಗೆ ದಾವಣಗೆರೆಯ ಸಿದ್ದು ರಾಯಭಾಗ ಅವರ ಗಾಯನ ಕಾರ್ಯಕ್ರಮದೊಂದಿಗೆ ಆರಂಭವಾಗುವ ‘ಸಂಗೀತೋತ್ಸವ’ ದಿನವಿಡೀ ನಡೆಯಲಿದೆ. ಕಾರ್ಯಕ್ರಮವನ್ನು ಶಾಸಕ ಶ್ರೀವತ್ಸ ಉದ್ಘಾಟಿಸಲಿದ್ದಾರೆ. ಇದೇ ವೇಳೆ ಬೆಂಗಳೂರಿನ ಪ್ರದ್ಯುಮ್ನ ಕರ್ಪೂರ ಅವರಿಂದ ‘ಪುಟ್ಟಶ್ರೀ ಸಮ್ಮಾನ’ ಪ್ರಶಸ್ತಿಯನ್ನು ಉದ್ಯಮಿ ಜಗನ್ನಾಥ್ ಶೆಣೈ ಪ್ರದಾನ ಮಾಡಲಿದ್ದಾರೆ.