ಸಿಂಗಟಾಲೂರು ಬ್ಯಾರೇಜ್ ಸ್ಥಗಿತ

BYAREJ GET
Published on

ಮುಂಡರಗಿ(ಗದಗ:) ತಾಲೂಕಿನ ಸಿಂಗಟಾಲೂರ ಬ್ಯಾರೇಜಿಗೆ ಅ. 24 ರಿಂದ 28 ರ ವರೆಗೆ ತುಂಗಭದ್ರಾ ನದಿಗೆ ಒಳ ಹರಿವು ಇಲ್ಲದಿರುವ ಕಾರಣ ಹಾಗೂ ಸಿಂಗಟಾಲೂರು ಬ್ಯಾರೇಜಿನಲ್ಲಿ ಕುಡಿಯುವ ನೀರಿನ ಶೇಖರಣೆ ಮಾಡಬೇಕಾಗಿರುವುದರಿಂದ ಸಿಂಗಟಾಲೂರ ಬ್ಯಾರೇಜಿನ ಬಲ ಭಾಗದ ಮತ್ತು ಎಡ ಭಾಗದ ಲಿಫ್ಟ್ ಗಳನ್ನು ಸ್ಥಗಿತಗೊಳಿಸುವುದು ಅವಶ್ಯಕವಾಗಿರುತ್ತದೆ. ಅ. 29 ರಿಂದ ಲಿಫ್ಟ್ ಗಳನ್ನು ಸ್ಥಗಿತಗೊಳಿಸಲಾಗುವುದು. ರೈತರು ಮತ್ತು ಸಾರ್ವಜನಿಕರು ಸಹಕಾರ ನೀಡಬೇಕೆಂದು ಸಿಂಗಟಾಲೂರ ಏತ ನೀರಾವರಿ ಯೋಜನೆಯ ಕಾರ್ಯಪಾಲಕ ಅಭಿಯಂತರರು ಪ್ರಕಟಣೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net