

ಹೂವಿನಹಡಗಲಿ: ಮಲೆನಾಡು ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ರಾಜವಾಳದ ಸಿಂಗಟಾಲೂರು ಬ್ಯಾರೇಜ್ ಒಳಹರಿವು ಹೆಚ್ಚಿದ್ದು, ಆರು ಗೇಟ್‌ಗಳ ತೆರೆದು ನದಿಗೆ ನೀರು ಹರಿಸಲಾಗಿದೆ.
ಬ್ಯಾರೇಜ್‌ನಲ್ಲಿ ಭಾನುವಾರ 20658 ಕ್ಯೂಸೆಕ್ ನೀರು ಹರಿದು ಬಂದಿದ್ದು, 6 ಗೇಟ್‌ಗಳನ್ನು ತೆರೆದು ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಯಿತು. ಶನಿವಾರ 45,732 ಕ್ಯೂಸೆಕ್ ಒಳಹರಿವು ಇತ್ತು. ಭಾನುವಾರ ಅರ್ಧದಷ್ಟು ಕಡಿಮೆಯಾಗಿದೆ.