

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಸಿಂಗನಹಳ್ಳಿ ಸರ್ಕಾರಿ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಶೇ. 100 ಆಗಿದೆ. ಶೊಯೇಬ್ ಕಿತ್ತೂರ ಶೇ. 98.72 ಅಂಕ ಪಡೆದು ಶಾಲೆಗೆ ಪ್ರಥಮ, ಪವಿತ್ರಾ ಜಿದ್ದಿಮಠ ಶೇ. 97.76 ದ್ವಿತೀಯ, ಗದಿಗೇಶ ರಾಮನಾಳ ಶೇ. 96.64 ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ. ದಿಯಾ ಹುಂಡೇಕರ ಶೇ. 95.52, ಪ್ರವೀಣ ಮಡಿವಾಳರ ಶೇ. 95.36, ಸಲ್ಮಾಬೇಗಂ ನಧಾಫ ಶೇ. 95.04, ದೀಪಿಕಾ ಸುಂಕದ ಶೇ. 95.04, ಅಫ್ರೋಜ್ ಕವಳಿಕಾಯಿ ಶೇ. 94.08, ಪೂರ್ವಿ ವನಕುದರಿ ಶೇ. 93.92, ಕರಿಸಿದ್ದ ಹಿಪ್ಪರಗಿ ಶೇ. 93.92, ಸಚಿನರೆಡ್ಡಿ ಹದಲಿ ಶೇ. 93.76, ಮುಸ್ಕಾನ್ ಮಿರ್ಜಿ ಶೇ. 93.28, ಸಬಾ ಕಿತ್ತೂರ ಶೇ. 91.20 ಅಂಕ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಽಕಾರಿ ಗೋಪಾಲ ಲಮಾಣಿ, ಪ್ರಾಚಾರ್ಯ, ಸಿಬ್ಬಂದಿ ಅಭಿನಂದಿಸಿದ್ದಾರೆ.