ಕೋಟೆನಾಡಿನಲ್ಲಿ ಕೋಟಿ ಕಂಠ ಗಾಯನ

DSC_07133333333333333
Published on
ಚಿತ್ರದುರ್ಗ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗಾಯನ ಕಾರ‌್ಯಕ್ರಮದ ಅಂಗವಾಗಿ ಕೋಟೆ,ಜಿಲ್ಲಾಧಿಕಾರಿ ಕಚೇರಿ ಆವರಣ ಸೇರಿದಂತೆ ನಗರ ಹಾಗೂ ಜಿಲ್ಲೆಯ ಹಲವೆಡೆ ಕನ್ನಡ ಗೀತೆಗಳ ಸಮೂಹ ಗಾಯನ ಕಾರ‌್ಯಕ್ರಮ ಜರುಗಿತು.

ರಾಷ್ಟ್ರಕವಿ ಕುವೆಂಪು ರಚಿತ ನಾಡಗೀತೆ ಜೈ ಭಾರತ ಜನನಿಯ ತನುಜಾತೆ...ಬಾರಿಸು ಕನ್ನಡ ಡಿಂಡಿಮವ...,ಹುಯಿಲಗೋಳ ನಾ ರಾ ಯಣರಾಯರ ಉದಯವಾಗಲಿ ಚಲುವ ಕನ್ನಡ ನಾಡು...,ಡಾ.ಡಿ.ಎಸ್.ಕರ್ಕಿಯವರ ಹಚ್ಚೇವು ಕನ್ನಡದ ದೀಪ...,ನಾಡೋಜ ಡಾ.ಚೆನ್ನವೀರ ಕಣವಿಯವರ ವಿಶ್ವವಿನೂತನ ವಿದ್ಯಾಚೇತನ...ಡಾ.ಹಂಸಲೇಖ ಅವರ ಸಾಹಿತ್ಯ ಹಾಗೂ ಸಂಗೀತದ ಚಿತ್ರಗೀತೆ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..ಹಾಡುಗಳನ್ನು ಸಾಮೂಹಿಕವಾಗಿ ಹಾಡಿದರು. ಹುಟ್ಟಿದರೆ ಗೀತೆಗೆ ವಿದ್ಯಾರ್ಥಿಗಳ ಸಹಿತ ಅನೇಕರು ಖುಷಿ ಯಿಂದ ಹೆಜ್ಜೆ ಹಾಕಿದರು.

ಕೋಟೆ ಆವರಣದಲ್ಲಿ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು,ಜಿಪಂ ಸಿಇಒ ಎಂ.ಎಸ್.ದಿವಾಕರ್,ಎಸ್ಪಿ ಕೆ.ಪರಶುರಾಮ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು,ವಿದ್ಯಾರ್ಥಿಗಳು ನಾಗರಿಕರು ಭಾಗವಹಿಸಿದ್ದರು. ಡಿಸಿ ಕಚೇರಿ ಬಳಿ ಎಡಿಸಿ ಇ.ಬಾಲಕೃಷ್ಣ,ಆಹಾರ ಇ ಲಾಖೆ ಜೆಡಿ ಮಧುಸೂದನ್,ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ,ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್, ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ,ಡಿ ಆರ್‌ಡಿಒ ಡಿವೈಎಸ್ಪಿ ತಿಪ್ಪೇಸ್ವಾಮಿ,ರಂಗಕರ್ಮಿ ಕೆ.ಪಿ.ಗಣೇಶಯ್ಯ ಇತರರು ಇದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net