ನೋವಿನ ಪ್ರತೀಕಾರವೇ ಸಿಂಧೂರ

20mdlg2
Published on

ಮೂಡಲಗಿ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ನಮ್ಮ ಸೈನಿಕರು ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಪಟ್ಟಣದ ಕಲ್ಮೇಶ್ವರ ವತ್ತದ ಬಳಿ ಮಂಗಳವಾರ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಮಾತನಾಡಿ, ನಮ್ಮ ಸೈನಿಕರ ದಾಳಿಗೆ ಈಗ ಪಾಕ್ ಅಕ್ಷರಶಃ ಕಂಗಾಲಾಗಿದೆ. ನಮ್ಮ ಸೈನಿಕರಿಗೆ ನೈತಿಕ ಸ್ಥೈರ್ಯ ತುಂಬಲು ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ನಮ್ಮ ದೇಶವನ್ನು ಸಂರಕ್ಷಿಸುವ ಜವಾನ್ ಮತ್ತು ಕಿಸಾನ್ ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ. ಅವರನ್ನು ಸದಾ ಗೌರವಿಸಬೇಕು ಎಂದರು.

ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಅರಬಾವಿ ಮಂಡಲಾಧ್ಯಕ್ಷ ಮಹಾದೇವ ಶೆಕ್ಕಿ, ಪುರಸಭೆ ಅಧ್ಯಕ್ಷೆ ಖುರ್ಷದಾ ನದ್ಾ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಢವಳೇಶ್ವರ, ಮುಖಂಡರಾದ ರವೀಂದ್ರ ಸೋನವಾಲ್ಕರ್, ಆರ್.ಬಿ. ಹಂದಿಗುಂದ, ಗೋವಿಂದ ಕೊಪ್ಪದ, ರವಿ ಸಣ್ಣಕ್ಕಿ, ಸಂತೋಷ ಸೋನವಾಲ್ಕರ್, ಹಣಮಂತ ಗುಡ್ಲಮನಿ, ಈರಣ್ಣ ಅಂಗಡಿ, ಈರಣ್ಣ ಬನ್ನೂರು, ಲಕ್ಷ್ಮಣ ಅಡಿಹುಡಿ, ಮರೆಪ್ಪ ಮರೆಪ್ಪಗೋಳ, ಪ್ರಶಾಂತ ನಿಡಗುಂದಿ, ಮಹಾಂತೇಶ ಕುಡಚಿ, ಪುರಸಭೆಯ ಸದಸ್ಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net