

ಬದಿಯಡ್ಕ: ಇಲ್ಲಿನ ಶ್ರೀ ಭಾರತಿ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳನ್ನೂ ಸಿಂಧೂರವನ್ನಿಟ್ಟು ಆರತಿಯನ್ನು ಬೆಳಗಿ ಹರುಷದಿಂದ ಬರವಾಡಿಕೊಳ್ಳಲಾಯಿತು.
ಸರಸ್ವತಿ ದೇವಿಯ ಭಾವಚಿತ್ರಕ್ಕೆ ಡಾ ಬೇ.ಸೀ.ಗೋಪಾಲಕಷ್ಣ ಭಟ್ ಪುಷ್ಪಾರ್ಚನೆ ಮಾಡಿದರು. ಶಾಲಾ ಅಧ್ಯಕ್ಷ ಡಾ.ವೈ.ವಿ.ಕಷ್ಣಮೂರ್ತಿ, ಮಾತೃತ್ವಂ ಅಧ್ಯಕ್ಷೆ ಈಶ್ವರಿ ಬೇರ್ಕಡವು, ರಕ್ಷಕ ಶಿಕ್ಷಕ ಸಂದ ಅಧ್ಯಕ್ಷ ಅನಂತಕಷ್ಣ ಚಡಗ ಶುಭಹಾರೈಸಿದರು. ಶಾಲಾ ಪ್ರಬಂಧಕ ಜಯಪ್ರಕಾಶ ಪಜಿಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಸತ್ಯನಾರಾಯಣ ಶರ್ಮ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರಕೃತಿ ಅಳಕೆ ನಿರೂಪಿಸಿದರು. ಶಿಕ್ಷಕಿ ತೇಜಸ್ವಿನಿ ವಂದಿಸಿದರು.