

ಬಸವನಬಾಗೇವಾಡಿ: ದೇಶದ ರಕ್ಷಣೆಗೆ ಮತ್ತು ಸೈನಿಕರಿಗೆ ನೈತಿಕ ಬೆಂಬಲ ಸೂಚಿಸುವ ಉದ್ದೇಶದಿಂದ ಪಟ್ಟಣದ ಮೂಲ ನಂದೀಶ್ವರ(ಬಸವೇಶ್ವರ) ದೇವಸ್ಥಾನದಲ್ಲಿ ವಿವೇಕ ಬ್ರಿಗೇಡ್ ಹಾಗೂ ನಿವೃತ್ತ ಸೈನಿಕರ ಸಂಘದಿಂದ ಸೋಮವಾರ ಸಂಜೆ ವಿಶೇಷ ಪೂಜೆ ಸಲ್ಲಿಸಿ ಬಸವ ಪ್ರಸಾದ ವಿತರಿಸಲಾಯಿತು.
ವಿವೇಕ ಬ್ರಿಗೇಡ್ ಮುಖ್ಯಸ್ಥ ವಿನೂತ ಕಲ್ಲೂರ ಮಾತನಾಡಿ, ಆಪರೇಷನ್ ಸಿಂಧೂರ ಎಂದರೆ ಭಾರತೀಯ ಸೇನೆಯ ಧೈರ್ಯ, ತ್ಯಾಗ, ಶೌರ್ಯ ಮತ್ತು ದೇಶ ರಕ್ಷಿಸುವ ಸಂಕಲ್ಪವನ್ನು ಸೂಚ್ಯವಾಗಿ ತಿಳಿಸುತ್ತದೆ. ಇದು ಜೀವನ ಮತ್ತು ಬಲಿದಾನದೊಂದಿಗೆ ಸಂಬಂಧ ಹೊಂದಿದೆ. ಸಿಂಧೂರವು ಕೇವಲ ಒಂದು ವಸ್ತುವಲ್ಲ, ಭಾರತೀಯ ಸಂಸ್ಕೃತಿಯಲ್ಲಿ ಆಳವಾದ ಭಾವನಾತ್ಮಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಮೌಲ್ಯ ಹೊಂದಿದೆ ಎಂದು ಹೇಳಿದರು.
ಸಿಂಧೂರ ಕದನ ವಿರಾಮ ಉಲ್ಲಂಘನೆ ಮಾಡಿ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಮತ್ತು ಅಲ್ಲಿನ ಸೈನಿಕರು ಭಾರತ ದೇಶದ ಗಡಿ ಭಾಗದಲ್ಲಿ ತಮ್ಮ ಕಂತ್ರಿ ಬುದ್ಧಿಯನ್ನು ತೋರಿಸಿದೆ ಎಂದು ಅವರು ಕಿಡಿ ಕಾರಿದರು.
ನಿವೃತ್ತ್ತ ಸೈನಿಕರಾದ ಆರ್.ಐ. ಬಿರಾದಾರ, ಪ್ರಕಾಶ ಮುಖಾರ್ತಿಹಾಳ, ಶಿವಾನಂದ ಅಡಿಗಿಮನಿ, ಬಿ.ಎ. ವಡ್ಡರ, ಎ.ಐ.ಯರನಾಳ, ಬಸಪ್ಪ ಅವಟಿ, ಸಂಗಮೇಶ ಜಾಲಗೇರಿ, ಎಂ.ಎಸ್. ತಳವಾರ, ವಿವೇಕ ಬ್ರಿಗೇಡ್ ಸದಸ್ಯರಾದ ಶಿವಾನಂದ ತೋಳನೂರ, ರವಿ ಚಿಕ್ಕೊಂಡ, ಕಸಾಪ ಮಾಜಿ ಅಧ್ಯಕ್ಷ ಶಿವರುದ್ರಯ್ಯ ಹಿರೇಮಠ, ಸಂಗಣ್ಣ ಹೂಜರತಿ, ಕೊಟ್ರೇಶ್ ಹೆಗಡಾಳ, ಶಶಿಧರ ಸ್ಥಾವರಮಠ, ಮಣಿಕಂಠ ಕಲ್ಲೂರ, ಪೃಥ್ವಿರಾಜ್ ನಾಯ್ಕೋಡಿ, ಮಹೇಶ್ ಅವಟಿ, ಸ್ವರೂಪರಾಣಿ ಬಿಂಜಲಭಾವಿ, ಪ್ರಾಣೇಶ ಹೂಗಾರ, ಬಸವರಾಜ ನಾಯ್ಕೋಡಿ, ರಾಮು ಕಲ್ಲೂರ, ಕರಣ್ ಕುಮಾವತ್ ಪಾಲ್ಗೊಂಡಿದ್ದರು.