ಕೋಟತಟ್ಟು ಕಾರಂತ ಥೀಂಪಾರ್ಕ್‌ನಲ್ಲಿ ಸಿಂಧೂರ ಸಂಜೀವಿನಿ ಒಕ್ಕೂಟ ಸಭೆ

SANJIVINI
ಸಿಂಧೂರ ಸಂಜೀವಿನಿ ಒಕ್ಕೂಟ ವಾರ್ಷಿಕ ಮಹಾಸಭೆಯಲ್ಲಿ ರಂಜನಿ ಪಡುಕರೆ, ಗೀತಾ, ಶಾರದಾ, ಪ್ರದೀಪ್, ಸುಂದರ್, ಗಾಯತ್ರಿ ಉಡುಪ ಅವರನ್ನು ಸನ್ಮಾನಿಸಲಾಯಿತು
Published on

ಕೋಟ: ಕೋಟತಟ್ಟು ಕಾರಂತ ಥೀಂಪಾರ್ಕ್‌ನಲ್ಲಿ ಕೋಟತಟ್ಟು ಗ್ರಾಪಂನ ಸಿಂಧೂರ ಸಂಜೀವಿನಿ ಒಕ್ಕೂಟ ವಾರ್ಷಿಕ ಮಹಾಸಭೆ ಶುಕ್ರವಾರ ನಡೆಯಿತು.
ಕೋಟತಟ್ಟು ಗ್ರಾಪಂ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ರಂಜನಿ ಪಡುಕರೆ, ಗೀತಾ, ಶಾರದಾ, ಪ್ರದೀಪ್, ಸುಂದರ್, ಗಾಯತ್ರಿ ಉಡುಪ ಅವರನ್ನು ಸನ್ಮಾನಿಸಲಾಯಿತು. ಸಿಂಧೂರ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಸಂಗೀತಾ ಅಧ್ಯಕ್ಷತೆ ವಹಿಸಿದ್ದರು

ಪಿಡಿಒ ರವೀಂದ್ರ ರಾವ್, ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್, ಉಪಾಧ್ಯಕ್ಷೆ ಸರಸ್ವತಿ ಪೂಜಾರಿ, ಸದಸ್ಯರಾದ ವಾಸು ಪೂಜಾರಿ, ರವೀಂದ್ರ ತಿಂಗಳಾಯ, ವಿದ್ಯಾ ಸಾಲಿಯಾನ್, ಕಾರ್ಯದರ್ಶಿ ಸುಮತಿ ಅಂಚನ್, ಸಂಜೀವಿನಿ ಒಕ್ಕೂಟ ತಾಲೂಕು ವ್ಯವಸ್ಥಾಪಕ ಪ್ರಶಾಂತ್, ಗ್ರಾಮಸಭೆ ನೋಡಲ್ ಅಧಿಕಾರಿ ಅನಿಲ್ ಕುಮಾರ್, ಸಂಜೀವಿನಿ ಒಕ್ಕೂಟ ತಾಲೂಕು ಕೃಷಿ ಸಖಿ ಜ್ಯೋತಿ, ಕೋಟತಟ್ಟು ಸಿಂಧೂರ ಒಕ್ಕೂಟ ಕೋಶಾಧಿಕಾರಿ ಅನಿತಾ, ಉಪಾಧ್ಯಕ್ಷೆ ಅಂಬಿಕಾ, ಕೃಷಿ ಸಖಿ ಗೀತಾ ಶಂಕರ್, ಪಶುಸಖಿ ಸುಜಾತ ಕಾಳಿಂಗ, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಎಲ್‌ಸಿಆರ್‌ಪಿ ವಸಂತಿ ಕುಂದರ್ ವರದಿ ವಾಚಿಸಿದರು. ಎಂಬಿಕೆ ವಾಣಿಶ್ರೀ ಆಚಾರ್ ಲೆಕ್ಕಪತ್ರ ಮಂಡಿಸಿದರು. ಎಲ್‌ಸಿಆರ್‌ಪಿ ಸುಜಾತ ಉದಯ್ ತಿಂಗಳಾಯ ಸ್ವಾಗತಿಸಿದರು. ವಸಂತಿ ಹಂದಟ್ಟು ಕಾರ್ಯಕ್ರಮ ನಿರೂಪಿಸಿದರು. ಶ್ಯಾಮಲ ಚಂದ್ರ ಪುತ್ರನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net