ಬಿಸಿಲಿನಲ್ಲಿ ತಾಳೆಹಣ್ಣು ಮಾರಾಟ ಜೋರು

Untitled design (48)
ಸಿಂಧನೂರಿನ ಕುಷ್ಟಗಿ ರಸ್ತೆ ಮಾರ್ಗ ಎಪಿಎಂಸಿ ಬಳಿ ತಾಳೆಹಣ್ಣು ಮಾರುತ್ತಿರುವುದು.
Published on

ಸಿಂಧನೂರು: ಬೇಸಿಗೆ ಕಾಲದ ಅಪರೂಪದ ಅತಿಥಿ ತಾಳೆಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ನಗರದ ಮುಖ್ಯ ರಸ್ತೆ, ಜನನಿಬಿಡ ರಸ್ತೆಗಳಲ್ಲಿ ಎತ್ತ ಕಣ್ಣಾಯಿಸಿ ನೋಡಿದರೂ ಈಗ ತಾಳೆಹಣ್ಣುಗಳದ್ದೆ ದರ್ಶನ.

ತಾಲೂಕಿನಲ್ಲಿ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಹಲವು ಜನರು ಎಳನೀರಿಗೆ ಮೊರೆ ಹೋಗಿದ್ದರು. ಆದರೆ 50 ರೂ.ದಿಂದ 60 ಒಂದು ಎಳನೀರು ದರವಾಗಿರುವುದರಿಂದ ತಮಿಳುನಾಡು, ಆಂಧ್ರಪ್ರದೇಶ, ಸುತ್ತಲಿನ ಕೆಲವು ಪ್ರದೇಶಗಳಿಂದ ಬರುವ ತಾಳೆಹಣ್ಣಿನ ದರ ಕಡಿಮೆ ಇದೆ. ಎಳೆನೀರುಗಿಂತ ಸುಲಭವಾಗಿ ತಾಳೆಹಣ್ಣು ಬಡವರಿಗೆ ಕೈಗೆಟುಕುತ್ತಿದೆ. ಹಣ್ಣು ಸೇವಿಸಿದರೆ ದೇಹದಲ್ಲಿ ಉಷ್ಣಾಂಶ ಕಡಿಮೆ ಆಗುತ್ತದೆ. ಬಿಸಿಲಿನ ಸಂದರ್ಭದಲ್ಲಿ ಸೇವಿಸಿದರೆ ತಂಪು ನೀಡುತ್ತದೆ.

ಬೇಸಿಗೆಯಲ್ಲಿ ತಾಳೆಹಣ್ಣು ಸೇವಿಸುವರ ಸಂಖ್ಯೆ ಹೆಚ್ಚಾದರೂ ಅದರ ಬೆಲೆ ಮಾತ್ರ ಸಾಮಾನ್ಯರ ಪಾಲಿಗೆ ಕೈಗೆಟುಕುವ ದರದಲ್ಲಿ ಸಿಗುತ್ತಿದೆ. ಒಂದು ಹಣ್ಣು 10 ರೂ.ದಿಂದ 15 ವರಗೆ ಮಾರಾಟವಾಗುತ್ತಿದೆ. ಉತ್ತಮ ಗುಣಮಟ್ಟದ ಹಣ್ಣು 15 ರೂ.ದಿಂದ 30 ರೂ.ವರೆಗೆ ದರವಿದೆ. ಬಂಗಾಲಿ ನಿವಾಸಿಗಳು ಈ ಹಣ್ಣುಗಳನ್ನು ತಮಿಳುನಾಡಿನಿಂದ ತರಿಸಿಕೊಂಡು ನಗರದ ಮುಖ್ಯ ರಸ್ತೆಯಲ್ಲಿ ತಳ್ಳುವ ಬಂಡಿಯಲ್ಲಿ ದಿನಿವಿಡೀ ಮಾರಾಟ ಮಾಡುವ ದೃಶ್ಯ ಕಂಡು ಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net