ಪ್ರತಾಪಗೌಡ ಪಾಟೀಲರ ಗೆಲ್ಲಿಸೋದು ನಮ್ಮ ಗುರಿ ಎಂದ ಸಂಸದ ಸಂಗಣ್ಣ ಕರಡಿ

mp karadi sanganna
Published on

ಸಿಂಧನೂರು: ಮಸ್ಕಿ ಉಪಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ್‌ರನ್ನು ಗೆಲ್ಲಿಸೋದು ನಮ್ಮ ಗುರಿ. ಈಗಾಗಲೇ ಕ್ಷೇತ್ರದಲ್ಲಿ ಇವರ ಪರ ಅಲೆ ಎದ್ದಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ತಿಳಿಸಿದರು.

ನಗರದಲ್ಲಿ ಶನಿವಾರ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಮರೇಗೌಡ ವಿರುಪಾಪುರ ನಿವಾಸದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಪ್ರತಾಪಗೌಡ ಪಾಟೀಲ್ ಪಾತ್ರ ಹೆಚ್ಚಿದೆ. ಸರ್ಕಾರ ಕೂಡ ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಹೇರಳ ಅನುದಾನವು ನೀಡಿದೆ. 450 ಕೋಟಿ ರೂ. ಕೆರೆ ತುಂಬಿಸುವ ಯೋಜನೆಗೆ ನೀಡಲಾಗಿದೆ. ನಂದವಾಡಗಿ, ಕನಕನಾಲಾ ಅಭಿವೃದ್ಧಿಗೂ ಮುಂದಾಗಲಾಗಿದ್ದು, ಗೆಲುವು ನಿಶ್ಚಿತ ಎಂದರು.

ನಯೋಪ್ರಾ ಅಧ್ಯಕ್ಷ ಅಮರೇಗೌಡ ವಿರುಪಾಪುರ, ಬಿಜೆಪಿ ಮಾಜಿ ಅಧ್ಯಕ್ಷ ದೇವೆಂದ್ರಪ್ಪ ಯಾಪಲಪರ್ವಿ, ನಗರಸಭೆ ನಾಮನಿರ್ದೇಶನ ಸದಸ್ಯ ಮಲ್ಲಿಕಾರ್ಜುನ ಜೀನೂರು, ನಯೋಪ್ರಾ ಸದಸ್ಯರಾದ ರೇಣುಕಪ್ಪ, ಜಡಿಯಪ್ಪ ವಕೀಲ, ಬಸವರಾಜ ಬಂಗಾರಶೆಟ್ರ, ರಾಮನಗೌಡ ವಕೀಲ, ಸಿದ್ರಾಮೇಶ ಮನ್ನಾಪುರ, ಯಲ್ಲುಸಾ ಬದಿ ಇತರರು ಇದ್ದರು.

ಏ.10 ವರೆಗೂ ನೀರು ಹರಿಸಲು ಚರ್ಚೆ
ತುಂಗಭದ್ರಾ ಎಡದಂಡೆ ನಾಲೆಗೆ ಮಾ.31 ವರೆಗೆ ಐಸಿಸಿ ಸಭೆಯಲ್ಲಿ ನಿರ್ಣಯಿಸಿದಂತೆ ನೀರು ಹರಿಯಲಿದೆ. ಜತೆಗೆ ರೈತರ ಹಿತದೃಷ್ಟಿಯಿಂದ ಏ.10 ವರೆಗೂ ನೀರು ಹರಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಕಳೆದ ವರ್ಷ ಮಾ.31 ವರೆಗೆ ಐಸಿಸಿ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಏ.20 ವರೆಗೆ ನೀರು ಹರಿಸಿ ಮೇಲ್ಭಾಗ ಹಾಗೂ ಕೆಳ ಭಾಗದ ಎಲ್ಲಾ ರೈತರ ಬೆಳೆ ರಕ್ಷಿಸಲಾಗಿದೆ. ಈಗ ಕೂಡ ಬೆಳೆ ರಕ್ಷಿಸಲು ಬದ್ಧರಾಗಿದ್ದೇವೆ. ಸಿಎಂ ಜತೆಗೆ ಇನ್ನೊಂದು ಬಾರಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net