ಪೆಟ್ರೋಲ್, ಡಿಸೆಲ್ ಬೆಲೆ ಏರಿಕೆ ಖಂಡಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರತಿಭಟನೆ

310322 Sindhanuru Black Congress Protest
ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೆಲ್ ಹಾಗೂ ಅನಿಲ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಸಿಂಧನೂರಿನಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಗುರುವಾರ ಬೆಲೆ ಏರಿಕೆ ಮುಕ್ತ ಭಾರತ ಅಭಿಯಾನ ನಡೆಸಿತು.
Published on

ಸಿಂಧನೂರು: ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೆಲ್ ಹಾಗೂ ಅನಿಲ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಗುರುವಾರ ವಿವಿಧ ವಾರ್ಡ್ ಹಾಗೂ ವಿವಿಧ ಗ್ರಾಮಗಳಲ್ಲಿ ಬೆಲೆ ಏರಿಕೆ ಮುಕ್ತ ಭಾರತ ಅಭಿಯಾನ ನಡೆಸಲಾಯಿತು.

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲ್ಲಿಕ್ ವಕೀಲ ಮಾತನಾಡಿ, ಪೆಟ್ರೋಲ್, ಡಿಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಸತತ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಜೀವನ ಮಟ್ಟ ಅದೋ ಗತಿಗೆ ಸಾಗುತ್ತಿದೆ. ಕಾಂಗ್ರೆಸ್ ನೇತೃತ್ವ ಸರ್ಕಾರದ ಸಂದರ್ಭದಲ್ಲಿ ಜನರಿಗೆ ಅನಕೂಲವಾಗುವ ಸೌಲಭ್ಯಗಳಿದ್ದವು. ಈಗ ಸೌಲಭ್ಯಗಳನ್ನು ಕಡಿತಗೊಳಿಸಿದ್ದಲ್ಲದೆ, ತೈಲಗಳ ಬೆಲೆ ಏರಿಕೆ ಮಾಡಿ ಹೊರೆಯಾಗಿಸಿವೆ ಎಂದು ದೂರಿದರು. ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಉಪಾಧ್ಯಕ್ಷ ಮುರ್ತುಜ್‌ಹುಸೇನ, ವೀರಭದ್ರಪ್ಪ ಗಸ್ತಿ, ಶಪ್ಪುಖಾನ್, ಚಂದ್ರಶೇಖರ ಮೇಟಿ, ಆಲಂಬಾಷಾ, ಚನ್ನಬಸವ, ಅಮರೇಶ ಕೋಟೆ, ವಿರುಪಾಕ್ಷ, ಮಹಾಂತೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net