ಬಿಜೆಪಿ ಸಂಘಟನೆಗೆ ಒತ್ತು ನೀಡಿ

14022021 Sindhanoor BJP Meeting
Published on

ಸಿಂಧನೂರು: ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ಉಮೇಶ ಸಜ್ಜನ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಗ್ರಾಮೀಣ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು. ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಯೋಜನೆಗಳು ಜಾರಿಗೆ ತಂದಿದ್ದು ಸಮರ್ಪಕ ಅನುಷ್ಠಾನ ಜತೆಗೆ ಜನರಿಗೆ ಯೋಜನೆಗಳ ಮಹತ್ವ ತಿಳಿಸಬೇಕಿದೆ. ಪಕ್ಷ ಸಂಘಟನೆಗೆ ಕಾರ್ಯಸೂಚಿಗಳನ್ನು ಹಾಕಿಕೊಂಡಿದೆ ಎಂದರು.

ಮುಖಂಡರಾದ ಮಧ್ವರಾಜ್ ಆಚಾರ್ಯ, ಶಿವಬಸನಗೌಡ ಗೊರೇಬಾಳ, ಲಿಂಗಪ್ಪ ದಳಪತಿ, ಮಂಜುನಾಥ ಹರಸೂರು, ಒಬಿಸಿ ಗ್ರಾಮೀಣ ಮೋರ್ಚಾ ಅಧ್ಯಕ್ಷ ಶರಣು ಗೊರೇಬಾಳ, ನಿರುಪಾದಿ ಸುಕಾಲಪೇಟೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net