

ಕೆ.ಆರ್.ಪೇಟೆ: ತಾಲೂಕಿನ ಸಿಂಧುಘಟ್ಟ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಲಾವಣ್ಯ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದಿವ್ಯಾ ಗಿರೀಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ಲಾವಣ್ಯಕುಮಾರ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ನಡೆಯಿತು.
ನೂತನ ಅಧ್ಯಕ್ಷೆ ಲಾವಣ್ಯಕುಮಾರ್ ಅವರನ್ನು ಶಾಸಕ ಎಚ್.ಟಿ.ಮಂಜು, ಟಿಎಪಿಸಿಎಂಎಸ್ ನಿರ್ದೇಶಕ ಎಚ್.ಟಿ.ಲೋಕೇಶ್, ಗ್ರಾಪಂ ಉಪಾಧ್ಯಕ್ಷ ನಂಜಪ್ಪ, ಪಿಡಿಒ ಕೆ.ಜೆ.ವಾಣಿ, ಕಾರ್ಯದರ್ಶಿ ಮಾದಪ್ಪ, ಮುಖಂಡರಾದ ಚಿದಂಬರ್, ಸುರೇಶ್, ಕಿಟ್ಟಿ, ಹೇಮಂತ್, ಬಲರಾಮೇಗೌಡ, ಲಿಖಿತ್, ಸಂತೋಷ್, ಸದಸ್ಯರಾದ ಆಶಾ ಸೋಮಶೇಖರ್, ನಾಗೇಶ್, ಜ್ಯೋತಿ, ಅತ್ತಿಮರನಹಳ್ಳಿ ನವೀನ್, ರಾಜೇಶ್ವರಿ, ಶರತ್, ಕ್ಯಾತನಹಳ್ಳಿ ಸೋಮಶೇಖರ್, ರೂಪಾ ಮಹಾದೇವ್ ಮತ್ತಿತರರು ಅಭಿನಂದಿಸಿದರು.