ಆಯುರ್ವೇದ ಪದ್ಧತಿಯಿಂದ ಆರೋಗ್ಯ

14112021 Sindhanoor Ayurvedic Medicine workshop
Published on

ಸಿಂಧನೂರು: ಆರೋಗ್ಯ ರಕ್ಷಣೆಗೆ ಆಯುರ್ವೇದ ಪದ್ಧತಿ ಔಷಧ ಗುಣವುಳ್ಳ ವಸ್ತುಗಳನ್ನು ಬಳಕೆ ಮಾಡಬೇಕು ಎಂದು ಪಾರಂಪರಿಕ ವೈದ್ಯ ಶ್ರೀಶೈಲ ಹುಲಿ ಹೇಳಿದರು.

ನಗರದ ದುದ್ದುಪೂಡಿ ಮಹಿಳಾ ಮಹಾ ವಿದ್ಯಾಲಯದಲ್ಲಿ ನೀಲಾಂಬಿಕ ಸೌಹಾರ್ದ ಸಹಕಾರಿ ನಿಯಮಿತ, ಕಲ್ಯಾಣ ಸಿಂಧು ಅಸೋಸಿಯೇಷನ್ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆಯುರ್ವೇದ ಔಷಧಗಳ ಮಹತ್ವದ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಬೆಳೆಗಳಿಗೆ ಕ್ರಿಮಿನಾಶಕ ಬಳಕೆ ಹೇರಳವಾಗಿದ್ದು ಆಹಾರ ವಿಷಪೂರಿತವಾಗಿ ಆರೋಗ್ಯಕ್ಕೆ ಅಪಾಯ ತಂದೊಡ್ಡಿವೆ. ಈ ಹಿಂದೆ ಆಯುರ್ವೇದದಿಂದಲೇ ರೋಗ ಗುಣಪಡಿಸಿಕೊಳ್ಳುತ್ತಿದ್ದರು. ಈಗ ಹೆಚ್ಚಿನ ಹಣ ವ್ಯಯಿಸಿದರೂ ಆರೋಗ್ಯ ಸುಧಾರಣೆ ಆಗುತ್ತಿಲ್ಲ ಎಂದರು.

ಯೋಗ ಶಿಕ್ಷಕ ಮಲ್ಲಣ್ಣ ಮಾತನಾಡಿ, ಎಲ್ಲ ರೋಗಗಳಿಗೂ ಯೋಗ ಮದ್ದು. ನಿತ್ಯ ಜೀವನದಲ್ಲಿ ಯೋಗ ಅಳವಡಿಸಿಕೊಂಡರೆ ಆಸ್ಪತ್ರೆಗೆ ಹೋಗುವ ತಾಪತ್ರಯ ತಪ್ಪುತ್ತದೆ. ಆಯುರ್ವೇದ ಚಿಕಿತ್ಸಾ ಪದ್ಧತಿ ರೋಗಕ್ಕೆ ಶಾಶ್ವತ ಪರಿಹಾರ ಒದಗಿಸುತ್ತದೆ ಎಂದರು.

ಸಹಕಾರಿ ಅಧ್ಯಕ್ಷ ಮಲ್ಲಿಕಾರ್ಜುನ ವಲ್ಕಂದಿನ್ನಿ ಅಧ್ಯಕ್ಷತೆ ವಹಿಸಿದ್ದರು. ಲತಾ ಸೇರಿದಂತೆ ಕಲ್ಯಾಣ ಸಿಂಧು ಅಸೋಸಿಯೇಷನ್ ಹಾಗೂ ಸಹಕಾರಿ ನಿರ್ದೇಶಕರು ಭಾಗವಹಿಸಿದ್ದರು. ಸಹಕಾರಿ ನಿರ್ದೇಶಕ ಚಂದ್ರೇಗೌಡ ಹರಟೆನೂರು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net